ಹೊಲಕ್ಕೆ ಓಡಾಡಲು ರಸ್ತೆ ಬಿಡಿಸಿಕೊಡಿ

25 ckm 3
ಚಿಕ್ಕಮಗಳೂರು ಜಿಲ್ಲೆ ಸಖರಾಯಪಟ್ಟಣದ ಪಿಎಸ್‌ಐ ಕಿರಣ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದ ಮಂಜೀಹಳ್ಳಿ ಗ್ರಾಮಸ್ಥರು ಮಂಜೀಹಳ್ಳಿಯಿAದ ನಿಡಗಟ್ಟದ ಕಡೆಗೆ ಹಾದು ಹೋಗುವ ರಸ್ತೆಯಲ್ಲಿ ಏಕಾಏಕಿ ಓಡಾಡಲು ತೊಂದರೆ ಮಾಡುತ್ತಿದ್ದು, ಕೂಡಲೇ ಅದನ್ನು ಬಿಡಿಸಿಕೊಡುವಂತೆ ಒತ್ತಾಯಿಸಿದರು. ಅಜ್ಜಯ್ಯ, ಮೋಹನ್‌ಕುಮಾರ್, ಚಂದ್ರಪ್ಪ, ಈರಣ್ಣ, ಮರುಳಪ್ಪ, ಮಹೇಶ್ವರಪ್ಪ, ಶೇಖರಪ್ಪ, ಮಲ್ಲಿಕಾ, ರೂಪ, ಲಾವಣ್ಯ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಸಖರಾಯಪಟ್ಟಣ ಸಮೀಪದ ಮಂಜೀಹಳ್ಳಿಯಿAದ ನಿಡಗಟ್ಟದ ಕಡೆಗೆ ಹಾದು ಹೋಗುವ ರಸ್ತೆಯಲ್ಲಿ ಏಕಾಏಕಿ ಓಡಾಡಲು ತೊಂದರೆ ಮಾಡುತ್ತಿದ್ದಾರೆ. ಅದನ್ನು ಕೂಡಲೇ ಬಿಡಿಸಿಕೊಡುವಂತೆ ಭಾನುವಾರ ಮಂಜೀಹಳ್ಳಿ ಗ್ರಾಮಸ್ಥರು ಸಖರಾಯಪಟ್ಟಣದ ಪೊಲೀಸ್ ಠಾಣೆಯ ಪಿಎಸ್‌ಐಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಅಜ್ಜಯ್ಯ ಮಾತನಾಡಿ, ಸುಮಾರು ನೂರಾರು ವರ್ಷಗಳಿಂದ ನಮ್ಮ ಹಿರಿಯರು ಮಂಜಿಹಳ್ಳಿಯಿAದ ನಿಡಘಟ್ಟ , ಹಳ್ಳಕೆರೆ ಕಾವಲಿನಲ್ಲಿರುವ ನೂರಾರು ಎಕರೆ ಜಮೀನುಗಳಿಗೆ ಓಡಾಡುತ್ತಿದ್ದೆವು. ಆದರೆ ಈಗ ಏಕಾಏಕಿ ಶಿವರಾಮು ಎಂಬಾತ ಅಲ್ಲಿ ಓಡಾಡಲು ಅಡ್ಡಿಪಡಿಸುತ್ತಿದ್ದಾರೆ. ಅಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತ ಓಡಾಡಲು ಬಿಡುತ್ತಿಲ್ಲ. ಇದನ್ನು ಸರಿಪಡಿಸುವಂತೆ ಗ್ರಾಮಸ್ಥರೆಲ್ಲ ಬಂದಿz್ದೆÃವೆ. ಇದಕ್ಕೆ ನ್ಯಾಯ ಕೊಡಿಸಬೇಕಾಗಿ ಮನವಿ ಕೊಡುತ್ತಿz್ದÉÃವೆ ಎಂದರು.
ಗ್ರಾಮಸ್ಥ ಮೋಹನಕುಮಾರ್ ಮಾತನಾಡಿ, ಗ್ರಾಮಸ್ಥರು ಮತ್ತು ಮಹಿಳೆಯರು ಸೇರಿದಂತೆ ನಾವು ರೈತಾಪಿ ಕೆಲಸವನ್ನು ಮಾಡಿ ಜೀವನ ನಡೆಸುತ್ತಿz್ದÉÃವೆ. ನಾವು ರೈತರು. ಈ ರಸ್ತೆಯಲ್ಲಿ ೭೦ ವರ್ಷದಿಂದ ನಮ್ಮ ರೈತಾಪಿ ಕೆಲಸಗಳಿಗೆ ಓಡಾಡುತ್ತಿz್ದÉÃವೆ. ಇಲ್ಲಿಂದ ಏಳೆಂಟು ಹಳ್ಳಿಗಳಿಗೆ ಸಂಪರ್ಕವಿದೆ. ಆದರೆ ಈಗ ಸುಮಾರು ೬ ತಿಂಗಳಿನಿAದ ಓಡಾಡಲು ಬಿಡುತ್ತಿಲ್ಲ. ಏನಾದರೂ ಹೇಳಿದರೆ ಕೊಲೆ ಮಾಡುತ್ತೇನೆ. ಅಲ್ಲದೆ ಅಟ್ರಾಸಿಟಿ ಕೇಸನ್ನು ಹಾಕುವುದಾಗಿ ಬೆದರಿಕೆ ಒಡ್ಡುತ್ತಿದ್ದಾರೆ. ಈ ಸಂಬAಧ ಠಾಣಾಕಾರಿಗಳು ಅವರನ್ನು ಕರೆಸಿ ನಮಗೆ ಓಡಾಡಲು ನಾಗ ಬಿಡಿಸಿಕೊಡಬೇಕು ಎಂದು ಮನವಿ ಮಾಡಿದರು.
ಗ್ರಾಮಸ್ಥರನ್ನು ಉz್ದÉÃಶಿಸಿ ಮಾತನಾಡಿದ ಪಿಎಸ್‌ಐ ಕಿರಣ್ ಕುಮಾರ್, ರಸ್ತೆಗೆ ತೊಂದರೆ ಮಾಡಿರುವ ಶಿವರಾಮು ಅವರನ್ನು ಕರೆಸಿ ಹಾಗೂ ಕಂದಾಯಾಧಿಕಾರಿಗಳನ್ನು ಕರೆಸಿ ಮಾತನಾಡಿ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಮಂಜೀಹಳ್ಳಿ ಗ್ರಾಮಸ್ಥರಾದ ಚಂದ್ರಪ್ಪ, ಈರಣ್ಣ, ಮರುಳಪ್ಪ, ಮಹೇಶ್ವರಪ್ಪ, ಶೇಖರಣ್ಣ, ಮಲ್ಲಿಕ, ರೂಪ, ಲಾವಣ್ಯ, ಶೀಲ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net