

ಸೊರಬ: ವಿದ್ಯಾವಂತ ಯುವಕರು ಸರ್ಕಾರಿ ಉದ್ಯೋಗಕ್ಕೆ ಕಾಯದೆ ಸ್ವ ಉದ್ಯೋಗದಿಂದ ಜೀವನ ರೂಪಿಸಿಕೊಳ್ಳಲು ಮುಂದಾಗಬೇಕು ಎಂದು ಶಿವಮೊಗ್ಗ ಭೋವಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಸ್.ರವಿಕುಮಾರ್ ಸಲಹೆ ನೀಡಿದರು.
ಭಾನುವಾರ ಆನವಟ್ಟಿಯ ಗುರುಭವನದಲ್ಲಿ ತಾಲೂಕು ಭೋವಿ ಕ್ಷೇಮಾಭಿವೃದ್ಧಿ ಸಂಘ ಹಮ್ಮಿಕೊಂಡಿದ್ದ ಜಗದ್ಗುರು ಸಿದ್ದರಾಮೇಶ್ವರ ಜಯಂತಿ, ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಪ್ರತಿಭೆ ಇದ್ದು ಸರ್ಕಾರಿ ನೌಕರಿ ಸಿಗದಿದ್ದಾಗ ಸ್ವಂತ ಉದ್ಯೋಗ ಸೃಷ್ಟಿಸಿಕೊಳ್ಳುವ ಕೌಶಲ ಬೆಳೆಸಿಕೊಳ್ಳಬೇಕು. ಇದರಿಂದ ಜೀವನದಲ್ಲಿ ಬೇಗನೆ ಆರ್ಥಿಕವಾಗಿ ಚೇತರಿಸಿಕೊಳ್ಳಲು ಸಾಧ್ಯ. ಸಮಾಜದ ಅಭಿವೃದ್ಧಿ ಮತ್ತು ಏಳಿಗೆಗೆ ಪ್ರತಿಯೊಬ್ಬರು ಶ್ರಮಿಸುವ ಅಗತ್ಯವಿದೆ. ಸಮಾಜದ ಅಭಿವೃದ್ಧಿ ಮತ್ತು ಏಳಿಗೆಗೆ ಪ್ರತಿಯೊಬ್ಬರೂ ಶ್ರಮಿಸುವ ಅಗತ್ಯವಿದೆ. ಸಮಾಜ ಶೈಕ್ಷಣಿಕ, ರಾಜಕೀಯ ಹಾಗೂ ಆರ್ಥಿಕವಾಗಿ ಬಲಗೊಳ್ಳಲು ಸಂಘಟನೆ ಬಹಳ ಅಗತ್ಯ ಎಂದರು.
ಉಪನ್ಯಾಸಕ ಬಿ.ಬಂಗಾರಪ್ಪ ಮಾತನಾಡಿ, ದಲಿತರ ಉದ್ಧಾರ, ದಲಿತರಿಂದಲೇ ಸಾಧ್ಯ. ಇದು ಸಾಧ್ಯವಾಗುವುದು ಶಿಕ್ಷಣದಿಂದ ಮಾತ್ರ. ಸತತ ಪರಿಶ್ರಮದಿಂದ ವಿದ್ಯಾಭ್ಯಾಸ ಮಾಡಿದರೆ ಮಾತ್ರ ಸರ್ಕಾರಿ ನೌಕರಿ ಪಡೆಯಬಹುದು ಎಂದರು.
ತಾಲೂಕು ಅಧ್ಯಕ್ಷ ಎಚ್.ಜಯಪ್ಪ ಮಾತನಾಡಿ, ಸ್ವಾಭಿಮಾನದ ಸಮುದಾಯ ಭವನ ನಿರ್ಮಿಸಲು ನಿವೇಶನ ಖರೀದಿಸಿದ್ದು ಸಮಾಜದ ಉನ್ನತ ಅಽಕಾರಿಗಳು ಸೇರಿ ಸಮುದಾಯದ ಪ್ರತಿಯೊಬ್ಬರೂ ಭವನ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದರು.
ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಇತ್ತೀಚೆಗೆ ನಿವೃತ್ತಗೊಂಡ ಶಿಕ್ಷಕರನ್ನು ಸನ್ಮಾನಿಸಲಾಯಿತು. ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಜಿ ಶಿವಕುಮಾರ್, ಸಂಘಟನಾ ಕಾರ್ಯದರ್ಶಿಗಳಾದ ನೀಲಕಂಠ, ಚಂದ್ರಶೇಖರ್, ದೇಶಾದ್ರಿ ಹೊಸಮನಿ, ವಿವಿಧ ಇಲಾಖೆಯ ಅಽಕಾರಿಗಳಾದ ಎಚ್.ಸಿದ್ದಪ್ಪ, ಡಾ. ಪಿ ಈಶ್ವರ, ಚಂದ್ರಪ್ಪ, ಬಂಗಾರಪ್ಪ, ಓಂಕಾರಪ್ಪ, ಎಚ್.ವಿ.ಭೀಮಪ್ಪ, ಎಚ್.ವಿ ಕೃಷ್ಣಪ್ಪ, ಮುಖಂಡರಾದ ಜಯಶೀಲಪ್ಪ, ಷಣ್ಮುಖಪ್ಪ, ರವಿಕುಮಾರ್ ಇದ್ದರು.