ಹೈನುಗಾರಿಕೆಯಿಂದ ಬದುಕು ಕಟ್ಟಿಕೊಳ್ಳಿ

135345
ದೊಡ್ಡ ಹರವೆ ಗ್ರಾಮದಲ್ಲಿ ಪಶುಸಂಗೋಪನಾ ಆಸ್ಪತ್ರೆಯನ್ನು ಕೆ.ವೆಂಕಟೇಶ್ ಉದ್ಘಾಟಿಸಿದರು. ಟಿ.ಡಿ.ಸ್ವಾಮಿ, ರೆಹಮತ್ ಜಾನ್ ಬಾಬು, ಬಸವರಾಜ್, ಲೋಕೇಶ್, ಇದ್ದರು.
Published on

ಬೈಲುಕುಪ್ಪೆ: ರೈತರು ಹೈನುಗಾರಿಕೆಯಿಂದ ಬದುಕು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಸಾಕಷ್ಟು ಸಹಕಾರ ನೀಡಿದ್ದೇನೆ ಎಂದು ಪಶು ಸಂಗೋಪನ ಇಲಾಖೆ ಸಚಿವ ಕೆ.ವೆಂಕಟೇಶ್ ತಿಳಿಸಿದರು.

ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡ ಹರವೆ ಒಂದನೇ ಬ್ಲಾಕ್ ಗ್ರಾಮದಲ್ಲಿ ಪಶು ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದರು.

ಕಾಡಂಚಿನ ಗ್ರಾಮವಾದ ದೊಡ್ಡ ಹರವೆ 2ನೇ ಬ್ಲಾಕ್, ರಾಣಿಗೇಟ್, 16ನೇ ಸೈಟ್, ಗಿರಿಜನರ ಹಾಡಿಗಳು ಸೇರಿದಂತೆ ಸುತ್ತಮುತ್ತ ರೈತರು ಹೈನುಗಾರಿಕೆಯನ್ನು ಉಪಕಸುಬು ಮಾಡಿಕೊಂಡು ಉತ್ತಮ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಲಿದೆ. ರೈತರು ಸಾಕಿದ ಜಾನುವಾರುಗಳಿಗೆ ಯಾವುದೇ ಸಮಸ್ಯೆ ಬಂದರೆ ಕೂಡಲೇ ಹತ್ತಿರದಲ್ಲಿ ಪಶು ಆಸ್ಪತ್ರೆ ಇದ್ದಲ್ಲಿ ಅನುಕೂಲವಾಗುತ್ತದೆ. ಆ ನಿಟ್ಟಿನಲ್ಲಿ ಯೋಚಿಸಿ ಇಲಾಖೆ ವತಿಯಿಂದ ಸರ್ವೇ ನಡೆಸಿ ಜನರ ಬೇಡಿಕೆಯಂತೆ ಪಶುಆಸ್ಪತ್ರೆ ನಿರ್ಮಾಣ ಮಾಡಿ ನಾನೇ ಉದ್ಘಾಟನೆ ಮಾಡಿದ್ದೇನೆ ಎಂದು ಸಂತಸ ಹಂಚಿಕೊಂಡರು.

ಇದೇ ವೇಳೆ ಸಚಿವರು ಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಡೋಂಗ್ರಿ ಗೆರಾಸಿಯ ಕಾಲನಿಯ ಜನರ ಕುಂದು ಕೊರತೆ ಆಲಿಸಿದರು. ಡೋಂಗ್ರಿ ಗೆರಾಸಿಯ ಕಾಲನಿಗೆ ಸೇರಿದ ಸರ್ವೇ ನಂಬರ್ 37/2 ರಲ್ಲಿ 2 ಎಕರೆ 16 ಕುಂಟೆ ಜಮೀನು ಇಲ್ಲಿಯ ಸ್ಥಳೀಯ ಜನರಿಗೆ ನಿವೇಶನಕ್ಕಾಗಿ ಮೀಸಲಿಡಲಾಗಿದೆ. ಕೆಲವು ವರ್ಷಗಳ ಹಿಂದೆ ಕೆ.ಎಸ್. ಕಾಳಮರಿಗೌಡ ಅವರು ತಾಲೂಕಿನ ಶಾಸಕರಾಗಿದ್ದಾಗ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಆಗಮಿಸಿ ಸಾಂಕೇತಿಕವಾಗಿ ಕೆಲವರಿಗೆ ಮಾತ್ರ ಹಕ್ಕುಪತ್ರ ವಿತರಿಸಿದ್ದಾರೆ. ಇನ್ನುಳಿದವರಿಗೆ ಯಾರಿಗೂ ಹಕ್ಕು ಪತ್ರ ನೀಡದ ಕಾರಣ ಇಲ್ಲಿಯ ಗ್ರಾಮಸ್ಥರು ವಾಸದ ಮನೆ ನಿರ್ಮಿಸಿಕೊಳ್ಳಲಾಗುತ್ತಿಲ್ಲ ಎಂದು ಸಚಿವರಿಗೆ ಗ್ರಾಮಸ್ಥರು ಮನವರಿಕೆ ಮಾಡಿದರು. ಈ ವೇಳೆ ಸ್ಥಳದಲ್ಲೇ ಇದ್ದ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಅವರಿಗೆ ಸ್ಥಳ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುವಂತೆ ಸಚಿವರು ಸೂಚಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ಡಿ.ಸ್ವಾಮಿ. ರೆಹಮತ್ ಜಾನ್ ಬಾಬು, ಈಚೂರು ಲೋಕೇಶ್, ಚೆನ್ನಕಲ್ ಶೇಖರ್, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಧನರಾಜ್, ಮೈಸೂರು ಜಿಲ್ಲಾ ಹಿರಿಯ ಕಾರ್ಯದರ್ಶಿ ಸಮಿ ಉಲ್ಲಾಖಾನ್, ಬೈಲುಕುಪ್ಪೆ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಸುಬ್ರಮಣ್ಯ, ಬೈಲುಕುಪ್ಪೆ ಗ್ರಾಮ ಪಂಚಾಯಿತಿ ಸದಸ್ಯರಾದ ರಾಜಯ್ಯ, ನಿಶಾರ್ ಅಮ್ಮದ್, ಬಾಲಾಜಿ ರಘು, ಭಾರತಿ ಪ್ರಕಾಶ್, ರಾಜು, ಮುಖಂಡರಾದ ಬಸವರಾಜ್, ಮಹಾದೇವ್, ಕೆ.ಕೆ. ರಾಮಸ್ವಾಮಿ, ಮಲ್ಲೇಶ, ಮೋಹನ್, ಭರತ್, ಆನಂದ್, ಶಂಕರ್, ರಿಯಾಜ್, ಚೆನ್ನಪ್ಪ, ರಾಮೇಗೌಡ, ಗೋವಿಂದಯ್ಯ ಸಣ್ಣಯ್ಯ, ಹೊನ್ನಾಚಾರಿ, ತಹಸೀಲ್ದಾರ್ ನಿಸರ್ಗ ಪ್ರಿಯ, ಕಾರ್ಯ ನಿರ್ವಹಣಾಧಿಕಾರಿ ಸುನಿಲ್, ಪಿಡಿಒ ಬೋರೇಗೌಡ, ಪಶುಸಂಗೋಪನ ಡಾ.ಸೋಮಯ್ಯ, ಇಂಜಿನಿಯರ್‌ಗಳಾದ ವೆಂಕಟೇಶ್,ದಿನೇಶ್, ವಿವಿಧ ಇಲಾಖೆ ಅಧಿಕಾರಿಗಳು ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net