ಜೀವನ ಶೈಲಿಯಲ್ಲಿ ಬದಲಾವಣೆ ಕಂಡುಕೊಳ್ಳಿ

h12-kims
Published on

ಹುಬ್ಬಳ್ಳಿ: ಮಧುಮೇಹದಿಂದ ಬಹಳಷ್ಟು ಜನರ ಕಿಡ್ನಿಗೆ ಧಕ್ಕೆಯಾಗುತ್ತಿದೆ. ಜೀವನ ಶೈಲಿಯಲ್ಲಿ ಬದಲಾವಣೆ ಕಂಡುಕೊಳ್ಳದ ಹೊರತು ಕಿಡ್ನಿ ಸಮಸ್ಯೆ ತಪ್ಪಿದ್ದಲ್ಲ ಎಂದು ದಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಜನರಲ್ ಮ್ಯಾನೇಜರ್ ಶ್ರೀದೇವಿ ನಯರ್ ಆತಂಕ ವ್ಯಕ್ತಪಡಿಸಿದರು.

ನಗರದ ಕಿಮ್ಸ್​ನ ಮೂತ್ರಪಿಂಡಶಾಸ್ತ್ರ ವಿಭಾಗಕ್ಕೆ ದಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ವತಿಯಿಂದ 48 ಲಕ್ಷ ರೂ. ಮೌಲ್ಯದ 5 ಡಯಾಲಿಸ್ ಯಂತ್ರಗಳನ್ನು ಮಂಗಳವಾರ ದೇಣಿಗೆ ನೀಡಿ ಅವರು ಮಾತನಾಡಿದರು.

ಜನರ ಆರೋಗ್ಯಕ್ಕೆ ನಮ್ಮ ಕಂಪನಿ ಮೊದಲ ಆದ್ಯತೆ ನೀಡುತ್ತಿದೆ. ಆರೋಗ್ಯ ಚೆನ್ನಾಗಿದ್ದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಜನರು ಕೂಡ ತಮ್ಮ ಆರೋಗ್ಯದ ಕಡೆ ಕಾಳಜಿವಹಿಸಬೇಕು ಎಂದರು.

ಕಿಮ್್ಸ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಮಾತನಾಡಿ, ಈ ಕಂಪನಿಯು ತಮ್ಮ ಸಂಸ್ಥೆಗೆ ಡಯಾಲಿಸಿಸ್ ಯಂತ್ರಗಳನ್ನು ನೀಡಿದೆ. ಇವುಗಳನ್ನು ಬಡವರಿಗೆ ಬಳಕೆ ಮಾಡುತ್ತೇವೆ ಎಂದು ಅಭಯ ನೀಡಿದರು.

ಕಂಪನಿಯ ರೀಜನಲ್ ಮ್ಯಾನೇಜರ್​ಗಳಾದ ಸುರೇಶ ಬಾಬು ಮತ್ತು ಪ್ರದೀಪಕುಮಾರ ಎನ್. ಮಾತನಾಡಿ, ನಮ್ಮ ಕಂಪನಿ 105 ವರ್ಷಗಳ ಇತಿಹಾಸ ಹೊಂದಿದೆ. ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದವರ ನೆರವಿಗೆ ಸದಾ ಬದ್ಧವಾಗಿದೆ ಎಂದರು.

ಕಿಮ್ಸ್​ಗೆ ಡಯಾಲಿಸಿಸ್ ಯಂತ್ರ ದೇಣಿಗೆಯಾಗಿ ನೀಡಿದ ಶ್ರೀದೇವಿ ನಯ್ಯರ್ ಅವರಿಗೆ ಗ್ರೋಗ್ರೀನ್ ಪೆಡಲರ್ಸ್ ಅಧ್ಯಕ್ಷ ಬಾಲಚಂದ್ರ ಡಂಗನವರ ಅವರು ಸಸಿ ನೀಡಿ ಗೌರವಿಸಿದರು.

ವೈದ್ಯಕೀಯ ಅಧೀಕ್ಷಕ ಡಾ. ಅರುಣಕುಮಾರ ಸಿ., ಪ್ರಾಚಾರ್ಯ ಡಾ. ಈಶ್ವರ ಹೊಸಮನಿ, ಮೂತ್ರಪಿಂಡಶಾಸ್ತ್ರ ವಿಭಾಗದ ಮುಖ್ಯಸ್ಥ

ಡಾ. ವೆಂಕಟೇಶ ಮೊಗೇರ, ಮ್ಯಾನೇಜರ್ ಸುಧೀಂದ್ರ ಇಂಡೀಕರ, ನಾಗರಾಜ ಅಡಿಗಾ, ಪದ್ಮಜಾ ಕೆ.ವಿ., ಶಿವಾನಂದ ಹೊನಕೇರಿ, ದೇವದಾಸ ಮಜ್ಜಡ, ಬೆಂಗಳೂರು ಕಿಡ್ನಿ ಫೌಂಡೇಷನ್ ನಿರ್ದೇಶಕರಾದ ಮೋಹನ ಕೆ.ಎಚ್., ಚಂದ್ರ ನಟರಾಜನ್, ಸಲಹೆಗಾರ ವಂಸತಚಂದ್ರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net