

ಹುಬ್ಬಳ್ಳಿ: ಮಕರ ಸಂಕ್ರಮಣ ನಿಮಿತ್ತ ಹಳೇಹುಬ್ಬಳ್ಳಿಯ ಅರವಿಂದ ನಗರದ ಶ್ರೀ ಹುಲಿಗೆಮ್ಮದೇವಿ ದೇವಸ್ಥಾನದಲ್ಲಿ ಬ್ರಾಹ್ಮೀಮುಹೂರ್ತದಲ್ಲಿ ಶ್ರೀದೇವಿಯವರಿಗೆ ಮತ್ತು ಅಯ್ಯಪ್ಪಸ್ವಾಮಿ ಮೂರ್ತಿಗೆ ನವವಿಧ ಸ್ನಾನ, ಮಹಾಪಂಚಾಮೃತ ಅಭಿಷೇಕ, ಅಷ್ಟೋತ್ತರ ನಾಮಾವಳಿ ಪಠಣ ಇತ್ತೀಚೆಗೆ ಏರ್ಪಾಟಾಗಿತ್ತು.
ದೇವಸ್ಥಾನದ ಧರ್ಮದರ್ಶಿ ಮಾತೋಶ್ರೀ ಡಾ. ಹುಲಿಗೆಮ್ಮ ಪೋಸಾ ಅಮ್ಮನವರು ಉದಯ ಪೂಜೆ ಕೈಂಕರ್ಯ ನೆರವೇರಿಸಿದರು.
ಸಂಜೆ ಗೋಧೂಳಿ ಸಮಯದಲ್ಲಿ ಶ್ರೀ ಅಯ್ಯಪ್ಪಸ್ವಾಮಿಯ ಮಹಾಪೂಜೆ ವಿಜೃಂಭಣೆಯಿಂದ ಜರುಗಿತು.
ದೇವಸ್ಥಾನದ ಪ್ರಧಾನ ಅರ್ಚಕ ರವಿಕುಮಾರ ಮಡ್ಡಿ ಪೂಜಾ ಕೈಂಕರ್ಯ ನೆರವೇರಿಸಿದರು.
ಗುರು ಬನ್ನಿಕೊಪ್ಪ, ಪದ್ಮಾ ದಿವಟೆ, ಲತಾ ಹಳ್ಳಿಕೇರಿ ಇತರರು ಭಜನೆ ಮಾಡಿದರು. ಪ್ರಕಾಶ ಜಾಡರ ಮ್ಯೂಸಿಕ್ ಪ್ಯಾಡ್, ಮಂಜುನಾಥ ಇಂಗಳಹಳ್ಳಿ ಕೀ ಬೋರ್ಡ್ ಸಾಥ್ ನೀಡಿದರು.
ಪ್ರಮುಖರಾದ ತೋಟಪಪ್ಪ ನಿಡಗುಂದಿ, ಮಹೇಶ ದಾಬಡೆ, ಮಂಜುನಾಥ ಕಾಟಕರ, ರಾಜು ಕಾಳೆ, ಕೆ.ಪಿ. ಗೋಟೂರ, ವಿಠ್ಠಲ ಏಕಬೋಟೆ, ರಾಜು ತಾಂಬೆ, ಪ್ರಕಾಶ ಅರಗಂಜಿ, ಪರಶುರಾಮ ಸುಳ್ಳದ, ಪಾರ್ವತಿದೇವಿ ಹೊಂಬಳ, ಅನಿತಾ ಬಾಣದ, ರಾಜೇಶ್ವರಿ ಬಗಲಿ, ನಾಗರಾಜ ಮಾಸಣಗಿ, ವಿನಾಯಕ ಹಿಂಡಿ, ವಿರೂಪಾಕ್ಷ ಚಲವಾದಿ, ಅರುಣಕುಮಾರ ಹೆಬ್ಬಳ್ಳಿ ಇತರರು ಇದ್ದರು.