ಮೂಡಿಗೆರೆಯಲ್ಲಿ ಸಂಚಾರ ದಟ್ಟಣೆಗೆ ಮೇಜರ್ ಸರ್ಜರಿ

mdg 1 .1
Published on

ಮೂಡಿಗೆರೆ: ಪಟ್ಟಣದಲ್ಲಿ ವಾಹನಗಳ ಸಂಚಾರ ದಟ್ಟಣೆಯಿಂದ ರೋಸಿ ಹೋಗಿದ್ದ ಜನರಿಗೆ ಪಪಂಆಡಳಿತದ ತೀರ್ಮಾನ ಮತ್ತು ಪೊಲೀಸರ ಕಠಿಣ ಕ್ರಮದಿಂದಾಗಿ ವಾಹನ ಸವಾರರಿಗೆ ಸ್ವಲ್ಪ ನೆಮ್ಮದಿತಂದಿದೆ. ಬೇಕಾಬಿಟ್ಟಿಯಾಗಿ ವಾಹನಗಳನ್ನು ಪಾರ್ಕಿಂಗ್ ಮಾಡಿ ತೆರಳುತ್ತಿದ್ದವರು ಮತ್ತು ಸಂಚಾರನಿಯಮ ಉಲ್ಲಂಘಿಸುವವರಿಗೆ ಪೊಲೀಸರು ದಂಡದ ಬಿಸಿ ಮುಟ್ಟಿಸಿದ್ದರಿಂದ ಟ್ರಾಫಿಕ್ ಸಮಸ್ಯೆಗೆ ಬ್ರೇಕ್ಬಿದ್ದಿದೆ.

ಜು.8ರಂದು ಪಪಂ ಕಚೇರಿ ಸಭಾಂಗಣದಲ್ಲಿ ಪಪಂ ಆಡಳಿತದಿಂದ ಪೊಲೀಸರು ಮತ್ತು ಸಾರ್ವಜನಿಕರಸಭೆ ನಡೆಸಿ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ದೊರಕಿಸಲು ಕೆಲವು ತೀರ್ಮಾನಗಳನ್ನುತೆಗೆದುಕೊಳ್ಳಲಾಗಿತ್ತು. ಅದರಂತೆ ಪೊಲೀಸರು ಟ್ರಾಫಿಕ್ ಪೊಲೀಸರು ಕಾರ್ಯಚರಣೆ ನಡೆಸಿವಾಹನಗಳನ್ನು ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಪಾರ್ಕಿಂಗ್ ಮಾಡದಂತೆ ಸಾರ್ವಜನಿಕರಿಗೆ ಒಂದು ವಾರಅರಿವು ಮೂಡಿಸಿದ್ದಾರೆ. ಅದಕ್ಕೂ ಜಗ್ಗದೆ ರಸ್ತೆಯನ್ನು ಶೆಡ್ ಮಾಡಿಕೊಂಡಂತೆ ಕೆಲ ಬಡಾವಣೆಗಳಲ್ಲಿತಿಂಗಳುಗಟ್ಟಲೆ ವಾಹನಗಳನ್ನು ಪಾರ್ಕಿಂಗ್ ಮಾಡುತ್ತಿದ್ದ ಎಲ್ಲ ವಾಹನಗಳನ್ನು ಪೊಲೀಸರುತೆರವುಗೊಳಿಸಿದ್ದಾರೆ. ಅಲ್ಲಲ್ಲಿ ಪಾರ್ಕಿಂಗ್ ಮಾಡುವ ವಾಹನಗಳ ಚಕ್ರವನ್ನು ಲಾಕ್ ಮಾಡುವ ಮೂಲಕದಂಡದ ಬಿಸಿ ಮುಟ್ಟಿಸಿದ್ದಾರೆ.

ವಾರದ ಸಂತೆಯದಿನವಾರ ಶುಕ್ರವಾರ ಪೊಲೀಸರು, ಕೆಲ ರಸ್ತೆಗಳಲ್ಲಿ ಏಕಮುಖ ಸಂಚಾರವನ್ನುಬಿಗಿಗೊಳಿಸಿದ್ದಾರೆ. ಎಂ.ಜಿ.ರಸ್ತೆಯಲ್ಲಿ ಪೊಲೀಸ್ ಠಾಣೆ ಮುಂಭಾಗದಿಂದ ಟಿಎಪಿಸಿಎಂಎಸ್ಕಚೇರಿವರೆಗೆ ಒಂದು ಬದಿಯಲ್ಲಿ ದ್ವಿಚಕ್ರ ವಾಹನ, ಅಲ್ಲಿಂದ ಎಂ.ಜಿ.ರಸ್ತೆ ಕೊನೆಯವರೆಗೆ 4 ಚಕ್ರದವಾಹನ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಲಾಗಿದೆ.ಮೈಸೂರ್ ಬ್ಯಾಂಕ್ ರಸ್ತೆ, ಪೊಲೀಸ್ ಠಾಣೆ ಹಿಂಭಾಗದರಸ್ತೆ, ಬದ್ರಿಯಾ ಮಸೀದಿ ರಸ್ತೆ, ಈ ಮೂರು ರಸ್ತೆಗಳಲ್ಲಿ ಕೆ.ಎಂ.ರಸ್ತೆಯಿಂದ ಎಂ.ಜಿ.ರಸ್ತೆಗೆಏಕಮುಖವಾಗಿ ಸಂಚರಿಸಬೇಕು. ಅಜಾದ್ ರಸ್ತೆ, ಮೋಯ್ದಿನ್ ಕುಟ್ಟಿ ರಸ್ತೆ ಮತ್ತು ಕುರಿ ಮಾಂಸದಮಾರುಕಟ್ಟೆ ರಸ್ತೆ, ಈ ಮೂರು ರಸ್ತೆಗಳಲ್ಲಿ ಎಂ.ಜಿ.ರಸ್ತೆಯಿಂದ ಕೆ.ಎಂ.ರಸ್ತೆಗೆ ಸಂಚರಿಸಲು ಅವಕಾಶಮಾಡಿಕೊಡಲಾಗಿದೆ. ಯಾವ ವಾಹನ ಎಲ್ಲಿ ಪಾರ್ಕಿಂಗ್ ಮಾಡಬೇಕು ಹಾಗೂ ಏಕಮುಖ ಸಂಚಾರ ರಸ್ತೆಆರಂಭಗೊಳ್ಳುವ ಎಲ್ಲ ಕಡೆ ಪೊಲೀಸರು ಬ್ಯಾರಿಕೇಡ್ ಅಡ್ಡವಿಟ್ಟು ಸಾರ್ವಜನಿಕರಿಗೆ ಮಾಹಿತಿ ನೀಡುವಬ್ಯಾನರ್ ಅಳವಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net