

ವಿಜಯವಾಣಿ ಸುದ್ದಿಜಾಲ ಧಾರವಾಡ
ಪತಿ ಹಿರಿಯ ಕೆಎಎಸ್ ಅಽಕಾರಿ. ಪ್ರಸ್ತುತ ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ಡಿಮ್ಹಾನ್ಸ್)ನ ಮುಖ್ಯ ಆಡಳಿತಾಽಕಾರಿ. ಪತ್ನಿ ಕೂಡ ಕೆಎಎಸ್ ಅಽಕಾರಿ. ಪ್ರಸ್ತುತ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಸಚಿವೆ. ಈ ಇಬ್ಬರೂ ಹುಬ್ಬಳ್ಳಿ ನವನಗರದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ 6ನೇ ಘಟಿಕೋತ್ಸವದಲ್ಲಿ ವಿಶಿಷ್ಟ ಸಾಧನೆಗೆ ಪಾತ್ರರಾದರು.
ನಗರದ ಕೃಷಿ ವಿಶ್ವವಿದ್ಯಾಲಯ ಸಭಾಂಗಣದಲ್ಲಿ ಶುಕ್ರವಾರ ಜರುಗಿದ 6ನೇ ಘಟಿಕೋತ್ಸವದಲ್ಲಿ ಸರ್ಕಾರಿ ಅಽಕಾರಿಗಳಿಬ್ಬರೂ ಕಾನೂನು ಪದವಿಯಲ್ಲಿ ರ‍್ಯಾಂಕ್, ನಗದು ಪಾರಿತೋಷಕ ವಿಜೇತರಾಗಿ ಹೊರಹೊಮ್ಮಿ ವಿದ್ಯಾರ್ಥಿಗಳಿಗೆ ಮಾದರಿಯಾದರು.
ಮೇಜರ್ ಸಿದ್ದಲಿಂಗಯ್ಯ ಕ್ರಿಮಿನಲ್ ಲಾ ವಿಷಯದಲ್ಲಿ ಅತಿ ಹೆಚ್ಚು ಅಂಕ ಗಳಿಸುವ ಮೂಲಕ ಎಸ್.ಎಂ. ಪಂಚಗಟ್ಟಿ ಪ್ರಾಯೋಜಿತ ನಗದು ಪುರಸ್ಕಾರಕ್ಕೆ ಭಾಜನರಾದರು. ಅವರ ಪತ್ನಿ, ಕಾನೂನು ವಿಶ್ವವಿದ್ಯಾಲಯದ ಕುಲಸಚಿವೆ ಅನುರಾಧಾ ವಸ್ತçದ 3 ವರ್ಷಗಳ ಆಂಗ್ಲ ಮಾಧ್ಯಮ ಕಾನೂನು ಪದವಿಯಲ್ಲಿ 10ನೇ ರ‍್ಯಾಂಕ್ ಗಳಿಸಿದರು.
ಕಾನೂನು ಸಚಿವ ಎಚ್.ಕೆ. ಪಾಟೀಲ ನಗದು ಪುರಸ್ಕಾರ ಮತ್ತು ಪದವಿ ಪ್ರದಾನ ಮಾಡಿ ಶುಭಾಶಯ ಕೋರಿದರು.