ಮಂಗಳೂರು- ಯಶವಂತಪುರ- ಹುಬ್ಬಳ್ಳಿ ದಸರಾ ಸ್ಪೆಷಲ್ ರೈಲು

train
Published on

ಮಂಗಳೂರು: ಪ್ರಯಾಣಿಕರ ಬೇಡಿಕೆಯಂತೆ ಮಂಗಳೂರು ಜಂಕ್ಷನ್- ಹುಬ್ಬಳ್ಳಿ (ಯಶವಂತಪುರ ಮೂಲಕ) ನಡುವೆ ದಸರಾ ಸ್ಪೆಷಲ್ ರೈಲು ಆರಂಭಿಸಲು ನೈರುತ್ಯ ರೈಲ್ವೆ ತೀರ್ಮಾನಿಸಿದೆ.
ಹುಬ್ಬಳ್ಳಿ- ಮಂಗಳೂರು ಜಂಕ್ಷನ್ ಮಾರ್ಗದಲ್ಲಿ ಅ.20 ಮತ್ತು 23 ರಂದು (ಶುಕ್ರವಾರ ಮತ್ತು ಸೋಮವಾರ), ಮಂಗಳೂರು ಜಂಕ್ಷನ್- ಹುಬ್ಬಳ್ಳಿ ಮಾರ್ಗದಲ್ಲಿ ಅ.21 ಹಾಗೂ 24 ರಂದು (ಶನಿವಾರ ಮತ್ತು ಮಂಗಳವಾರ) ರೈಲು ಸಂಚರಿಸಲಿದೆ.
ವೇಳಾಪಟ್ಟಿ:
ನಿಗದಿತ ದಿನಗಳಂದು ಹುಬ್ಬಳ್ಳಿ- ಮಂಗಳೂರು ಜಂಕ್ಷನ್ ಎಕ್ಸ್‌ಪ್ರೆಸ್ (07303) ಮಧ್ಯಾಹ್ನ 3.30 ಕ್ಕೆ ಹುಬ್ಬಳಿಯಿಂದ ಹೊರಟು, ಯಶವಂತಪುರ (ಬೆಂಗಳೂರು) ಕ್ಕೆ ರಾತ್ರಿ 11.25 ಕ್ಕೆ ತಲುಪಿ ಮರುದಿನ ಬೆಳಗ್ಗೆ 9.40 ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ.
ಮಂಗಳೂರು ಜಂಕ್ಷನ್- ಹುಬ್ಬಳ್ಳಿ ಎಕ್ಸ್‌ಪ್ರೆಸ್ (07304) ಬೆಳಗ್ಗೆ 11.40 ಕ್ಕೆ ಮಂಗಳೂರು ಜಂಕ್ಷನ್ ನಿಂದ ಪ್ರಯಾಣ ಆರಂಭಿಸಿ ಯಶವಂತಪುರಕ್ಕೆ ರಾತ್ರಿ 9.20 ಕ್ಕೆ ತಲುಪಿ ಮರುದಿನ ಮುಂಜಾನೆ 5.45 ಕ್ಕೆ ಹುಬ್ಬಳ್ಳಿ ತಲುಪಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net