

ಹುಬ್ಬಳ್ಳಿ: ಮಜೇಥಿಯಾ ಫೌಂಡೇಷನ್ ಸಂಸ್ಥಾಪಕ ಜಿತೇಂದ್ರ ಮಜೇಥಿಯಾ ಅವರು ಹಲವಾರು ವರ್ಷದಿಂದ ಈ ಪುಣ್ಯಭೂಮಿಯಲ್ಲಿ ಸಮಾಜ ಸೇವೆ ಮಾಡುತ್ತ ಬಂದಿದ್ದು, ಕೃತಕ ಕೈಕಾಲು ಜೋಡಣೆ ಶಿಬಿರದ ಮೂಲಕ ಹಲವರ ಬದುಕಿಗೆ ದಾರಿ ತೋರಿದ್ದಾರೆ ಎಂದು ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.
ನಗರದಲ್ಲಿ ಭಾನುವಾರ ಫೌಂಡೇಷನ್ ವತಿಯಿಂದ ಏರ್ಪಡಿಸಿದ್ದ ಸುಮಾರು 300 ಜನರಿಗೆ ಕೃತಕ ಕೈಕಾಲು ಜೋಡಣೆ ಮಾಡುವ ಉಚಿತ ಶಿಬಿರದಲ್ಲಿ ಅವರು ಮಾತನಾಡಿದರು.
ದಿವ್ಯಾಂಗರು, ಅಪಘಾತದಲ್ಲಿ ಕಾಲು ಕಳೆದುಕೊಂಡವರಿಗೆ ಜೀವನ ಸಾಗಿಸಲು ಅನುಕೂಲ ಮಾಡಿಕೊಟ್ಟಿದ್ದಾರೆ. ಹೊಸ ಬದುಕಿಗೆ ಸನ್ಮಾರ್ಗ ತೋರಿದ್ದಾರೆ ಎಂದು ಶ್ಲಾಘಿಸಿದರು.
ಫೌಂಡೇಷನ್ ಚೇರ್ಮನ್ ಜಿತೇಂದ್ರ ಮಜೇಥಿಯಾ ಅವರು ಮಾತನಾಡಿ, ಜನರ ಸಹಕಾರ ಇದ್ದರೆ ನನ್ನ ಕರ್ಮಭೂಮಿ ಹುಬ್ಬಳ್ಳಿಯಲ್ಲಿ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡಿ ಇನ್ನೂ ಹೆಚ್ಚಿನ ಸಮಾಜ ಸೇವೆ ಮಾಡಲು ಸಿದ್ಧ ಎಂದರು.
ಡಾ. ಶ್ರೇಯಸ್ ಕನಕಪುರ, ಕಶ್ಯಪ ಮಜೇಥಿಯಾ, ಮಂಜುನಾಥ ಭಟ್, ಪ್ರಹ್ಲಾದರಾವ್, ಅಮೃತಲಾಲ್ ಪಟೇಲ್, ದಯಾಜಿ ಪಟೇಲ್, ಶ್ರೀಧರ ಜೋಶಿ, ಸಿಇಒ ಅಜಿತ ಕುಲಕಣಿರ್ ಹಾಜರಿದ್ದರು.
ಫೌಂಡೇಷನ್ ಕಾರ್ಯದಶಿರ್ ಅಮರೇಶ ಹಿಪ್ಪರಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುನೀಲ ಕುಕನೂರು ಕಾರ್ಯಕ್ರಮ ನಿರೂಪಿಸಿದರು, ನವೀನ ಕಾರ್ಯಕ್ರಮ ನಿರ್ವಹಿಸಿದರು. ಸುಶಾಂತರಾಜೆ ವಂದಿಸಿದರು.