ಮಜೇಥಿಯಾದಿಂದ ಪೌಷ್ಟಿಕ ಆಹಾರ ವಿತರಣೆ

IMG-20230906-WA0022.jpg
Published on

ಹುಬ್ಬಳ್ಳಿ: ಮಜೇಥಿಯಾ ಫೌಂಡೇಷನ್ ಸಮಾಜದ ಆರೋಗ್ಯ ದೃಷ್ಟಿಯಿಂದ ಈ ವರೆಗೆ ಹಲವು ಸಂಘ ಸಂಸ್ಥೆಗಳ ಮೂಲಕ ಪೌಷ್ಟಿಕ ಆಹಾರ ನೀಡುತ್ತ ಬಂದಿದೆ. ಪ್ರತಿ ತಿಂಗಳು ಅವಶ್ಯವಿರುವ ಜನರಿಗೆ ವಿತರಣೆಯಾಗುತ್ತಿದೆ ಎಂದು ಸಿಇಒ ಅಜಿತ ಕುಲಕಣಿರ್ ಹೇಳಿದರು.

ರೆಡ್ ಕ್ರಾಸ್ ಸಂಸ್ಥೆಯ ಮೂಲಕ ಅಶಕ್ತರು, ಗಭಿರ್ಣಿಯರು, ಮಕ್ಕಳಿಗೆ ವಿತರಿಸಲು ಬುಧವಾರ ನಗರದಲ್ಲಿ 150ಕ್ಕೂ ಹೆಚ್ಚು ಪೌಷ್ಟಿಕ ಆಹಾರದ ಪೊಟ್ಟಣಗಳನ್ನು ವಿತರಿಸಿ ಅವರು ಮಾತನಾಡಿದರು.

ಅವಳಿನಗರದಲ್ಲಿ ಹಲವಾರು ಸಂಘ ಸಂಸ್ಥೆಗಳ ಮಕ್ಕಳು, ಗಭಿರ್ಣಿಯರಿಗೆ ಅಪೌಷ್ಠಿಕತೆ ಉಂಟಾಗದಂತೆ ನಿರಂತರವಾಗಿ ಪೌಷ್ಠಿಕ ಆಹಾರ ನೀಡುತ್ತ ಬಂದಿದ್ದೇವೆ. ಇಂತಹ ಮಾನವೀಯ ಕಾರ್ಯಗಳನ್ನು ಮಾಡುವವರ ಜತೆಗೂ ಫೌಂಡೇಷನ್ ಕೈ ಜೋಡಿಸುತ್ತದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ರೆಡ್ ಕ್ರಾಸ್ ಮುಖ್ಯಸ್ಥ ಮಹಾಂತೇಶ ವೀರಾಪುರ ಮಾತನಾಡಿ, ಮಜೇಥಿಯಾ ಫೌಂಡೇಷನ್ ಸೇವೆ ನಿಜವಾಗಿಯು ಬಡವರಿಗೆ ಸಲ್ಲುತ್ತಿದೆ. ಅನೇಕ ಜನರಿಗೆ ಅನುಕೂಲವಾಗಿದೆ. ಇಂತಹ ಸೌಲಭ್ಯದ ಸದುಪಯೋಗವನ್ನು ಫಲಾನುಭವಿಗಳು ಪಡೆದುಕೊಳ್ಳಬೇಕು ಎಂದರು.

ಸುನೀಲ್ ಕುಕನೂರು ಸ್ವಾಗತಿಸಿದರು. ಬಾಳಿಕಾಯಿ ಅವರು ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net