

ಹುಬ್ಬಳ್ಳಿ: ಮಕ್ಕಳ ದಿನಾಚರಣೆ ಅಂಗವಾಗಿ ಮಜೇಥಿಯಾ ಫೌಂಡೇಷನ್ ಆಶ್ರಯದಲ್ಲಿ ನಗರದ ಗಬ್ಬೂರು ಗ್ರಾಮದ ವಿಶ್ವಧರ್ಮ ಅಂಗವಿಕಲರ ಶಾಲೆಯಲ್ಲಿ ಶುಕ್ರವಾರ ಚೇತನೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ನೂರಾರು ಅಂಗವಿಕಲ ಚಿಣ್ಣರೊಂದಿಗೆ ಆಟ, ಪಾಠ, ಊಟ, ಪ್ರಕೃತಿಯ ನೋಟ, ಜಾದು ಕಾರ್ಯಕ್ರಮಗಳು ಜರುಗಿದವು.
ಅಂಗವಿಕಲ ಚಿಣ್ಣರಿಗಾಗಿ ಏರ್ಪಡಿಸಿದ್ದ ಆಟ ಪಾಠ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಮಜೇಥಿಯಾ ಫೌಂಡೇಷನ್ ಅಧ್ಯೆ ನಂದಿನಿ ಕಶ್ಯಪ್ ಮಜೇಥಿಯಾ, ವಿದ್ಯಾಥಿರ್ಗಳು ಅಭ್ಯಾಸದೊಂದಿಗೆ ಕ್ರೀಡಾ ಚಟವಟಿಕೆಯಲ್ಲಿ ಭಾಗವಹಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕು. ಇದರಿಂದ ಉತ್ತಮ ಆರೋಗ್ಯ, ಲವಲವಿಕೆ, ಉತ್ಸಾಹ ಹೆಚ್ಚುತ್ತದೆ. ಬದುಕಿನಲ್ಲಿ ಯಾವುದೇ ಕಾರ್ಯ ಮಾಡುವಾಗ ಹುಮ್ಮಸ್ಸು ಇಮ್ಮಡಿಯಾಗುತ್ತದೆ ಎಂದರು.
ಕ್ರೀಡಾ ಪಟುಗಳಿಗೆ ಹೆಚ್ಚಿನ ಪ್ರೋತ್ಸಾಹ ಲಭಿಸುತ್ತಿದೆ. ಇದರ ಸದುಪಯೋಗ ಪಡಿಸಿಕೊಳ್ಳಬೇಕು. ಮೊಬೈಲ್ ಹಾಗೂ ಟಿವಿಗಳಿಂದ ದೂರವಿರಬೇಕು ಎಂದು ಸಲಹೆ ನೀಡಿದರು.
ಅತಿಥಿಗಳಾಗಿದ್ದ ರಮಿಲಾ ಪ್ರಶಾಂತಿ ಮಂದಿರ ಹಾಸ್ಪೆ$ಸ್ ವೈದ್ಯಾಧಿಕಾರಿ ಡಾ. ನಾಗರಾಜ ಸಾನು ಮಾತನಾಡಿ, ದಿವ್ಯಾಂಗರ ಸೇವೆ ಮಾಡಲು ನಮ್ಮ ವೈದ್ಯರ ತಂಡ ಸದಾ ನಿಮ್ಮೊಂದಿಗೆ ಇದೆ ಎಂದರು.
ರೈತ ಮುಖಂಡ ರವೀಂದ್ರ ಸಂಗೀತ ಮಾತನಾಡಿ, ವಿದ್ಯಾಥಿರ್ಗಳು ಶಿಕ್ಷಣ ಕ್ರೀಡೆಗೆ ಹೆಚ್ಚಿನ ಮಹತ್ವ ನೀಡುವುದು ಇಂದಿನ ಅವಶ್ಯವಾಗಿದೆ ಎಂದರು.
ಗುರುಸಿದ್ದಪ್ಪ ಮಾಯನ್ನವರ, ಕಾರ್ಯದಶಿರ್ ಅಮರೇಶ ಹಿಪ್ಪರಗಿ, ಅಮೃತಭಾಯ್ ಪಟೇಲ್, ದಯಾ ಪಟೇಲ್, ನವೀನ ಮಾಲಿನ, ಪೂಜಾ ಘಾವಡೆ, ರೇಷ್ಮಾ ತಡಕೊಡ, ರೋಹನ್ ಗೋಂದಕರ, ಕುಮಾರ ಶಿವಳ್ಳಿ ಉಪಸ್ಥಿತರಿದ್ದರು.
ಫೌಂಡೇಷನ್ ದಿವ್ಯಾಂಗ ಶಿಬಿರ ಮುಖ್ಯ ಸಂಯೋಜಕ ಮಂಜುನಾಥ ಭಟ್ ಅವರು ಕಾರ್ಯಕ್ರಮ ನಿರ್ವಹಿಸಿದರು. ಮುಖ್ಯಾಧ್ಯಾಪಕ ಉಮೇಶ ಮೂರನಾಳ ಸ್ವಾಗತಿಸಿದರು. ಸುನೀಲಕುಮಾರ್ ಕುಕ್ಕನೂರ್ ವಂದಿಸಿದರು.