ಮಜೇಥಿಯಾ ಫೌಂಡೇಷನ್ ಕೆಲಸ ಇತರರಿಗೆ ಮಾದರಿ

h12-majetiya
Published on

ಹುಬ್ಬಳ್ಳಿ: ಆರ್ಥಿಕವಾಗಿ ಹಿಂದುಳಿದವರು, ಅನಾರೋಗ್ಯಕ್ಕೀಡಾದವರು ಸೇರಿದಂತೆ ಅನೇಕರ ಹಿತ ಕಾಯುವ ಕೆಲಸ ಮಜೇಥಿಯಾ ಫೌಂಡೇಷನ್ ಮಾಡುತ್ತಿದೆ. ಈ ಮೂಲಕ ಫೌಂಡೇಷನ್ ಎಲ್ಲರಿಗೂ ಮಾದರಿಯಾಗಿದೆ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ನಿಜಲಿಂಗಪ್ಪ ಮಟ್ಟಿಹಾಳ ತಿಳಿಸಿದರು.

ಇಲ್ಲಿಯ ಮೂರುಸಾವಿರಮಠದ ಶಾಲಾ ಆವರಣದಲ್ಲಿ ಮಜೇಥಿಯಾ ಫೌಂಡೇಷನ್ ವತಿಯಿಂದ ಶನಿವಾರ ಏರ್ಪಡಿಸಿದ್ದ ಗುರುಪೂರ್ಣಿಮೆ ಹಾಗೂ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಜಿತೇಂದ್ರ ಮಜೇಥಿಯಾ ಅವರಂಥ ವ್ಯಕ್ತಿಗಳು ನಾಡಿಗೆ ಕೊಡುಗೆ ನೀಡುತ್ತಿದ್ದಾರೆ. ಇವರಂತೆ ಬಹಳಷ್ಟು ಜನರು ಮುಂದೆ ಬಂದು ಜನರಿಗೆ ಸಹಾಯ ಹಸ್ತ ಚಾಚಬೇಕು ಎಂದರು.

ಕೆಎಲ್ಇ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಲಿಂಗರಾಜ ಮುಳ್ಳಳ್ಳಿ ಮಾತನಾಡಿ, ವಿದ್ಯಾರ್ಥಿಗಳು ಗುರಿ ತಲುಪಬೇಕಾದರೆ ಕನಸು ಬಹಳ ಅವಶ್ಯಕ. ಕನಸ್ಸಿಗೆ ಅಡ್ಡಿಯಾಗುವ ಆರ್ಥಿಕತೆಯ ಬಲವನ್ನು ಮಜೇಥಿಯಾ ಫೌಂಡೇಷನ್ ತುಂಬುತ್ತಿದೆ. ಬಡ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಿ ಭವಿಷ್ಯಕ್ಕೆ ದಾರಿ ದೀಪವಾಗುತ್ತಿದೆ ಎಂದರು.

ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಪ್ರಾಚಾರ್ಯೆ ಶರ್ಮಿಳಾ ಹೊಸೂರ ಮಾತನಾಡಿ, ಮಜೇಥಿಯಾ ಫೌಂಡೇಷನ್ ಸ್ವಾರ್ಥವಿಲ್ಲದೆ ಸಾಮಾಜಿ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.

105 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಗುರುಪೂರ್ಣಿಮೆ ನಿಮಿತ್ತ ಅತಿಥಿಗಳನ್ನು ಸನ್ಮಾನಿಸಲಾಯಿತು.

ಫೌಂಡೇಷನ್ ಅಧ್ಯಕ್ಷೆ ನಂದಿನಿ ಕಶ್ಯಪ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟಿಗಳಾದ ಡಾ. ರಮೇಶ ಬಾಬು, ಡಾ. ವಿ.ಬಿ. ನಿಟಾಲಿ, ಅಮರೇಶ ಹಿಪ್ಪರಗಿ, ಪ್ರಹ್ಲಾದ ರಾವ್, ಸಿಇಒ ಸುನೀಲ್ಕುಮಾರ ಕುಕನೂರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net