

ಬೆಳವಣಿಕಿ(ತಾ.ರೋಣ): ಸಮೀಪದ ಮಲ್ಲಾಪುರ ಗ್ರಾಮದ ಹೊಲದಲ್ಲಿ ಬೆಂಕಿ ತಗುಲಿ ಅಪಾರ ಪ್ರಮಾಣದ ಜೋಳದ ಬೆಳೆ ನಾಶವಾಗಿದೆ. ರೈತ ಮಹಾಂತೇಶ ಮಲ್ಲಪ್ಪ ದಾನರಡ್ಡಿ ಅವರ ಹೊಲದಲ್ಲಿ 9-10 ಗುಂಟೆಯಲ್ಲಿನ ಜೋಳ ಬೆಂಕಿಗೆ ಆಹುತಿಯಾಗಿದೆ. ಅಗ್ನಿ ಶಾಮಕ ದಳದವರು ದೌಡಾಯಿಸಿ ಬೆಂಕಿ ನಂದಿಸಿ ಹೆಚ್ಚಿನ ಹಾನಿ ತಪ್ಪಿಸಿದರು. ಮಾಜಿ ಶಾಸಕ ಬಿ.ಆರ್. ಯಾವಗಲ್ಲ ಬೇಟಿ ನೀಡಿ ಪರಿಶೀಲಿಸಿದರು. ಅಧಿಕಾರಿಗಳನ್ನು ಮೊಬೈಲ್ ಮೂಲಕ ಸಂಪರ್ಕಿಸಿ ಪರಿಹಾರ ನೀಡುವಂತೆ ಆಗ್ರಹಿಸಿದರು.