

ಬಂಕಾಪುರ: ಜಮೀನಿನಲ್ಲಿ ಬೆಳೆದಿದ್ದ 4.16 ಲಕ್ಷ ರೂ. ಮೌಲ್ಯದ 160 ಕ್ವಿಂಟಾಲ್ನಷ್ಟು ಮೆಕ್ಕೆಜೋಳ ಬೆಳೆಯನ್ನು ಯಾರೋ ಕಳ್ಳತನ ಮಾಡಿರುವ ಘಟನೆ ಇಲ್ಲಿಗೆ ಸಮೀಪದ ಮುನವಳ್ಳಿ ಗ್ರಾಮದ ಬಳಿ ನಡೆದಿದೆ.
ಗುಲ್ಜಾರಅಹ್ಮದ್ ಮನ್ನಬಾಯಿ ಎಂಬುವರ ಜಮೀನಿನಲ್ಲಿ ಕಳ್ಳತನ ಆಗಿರುವುದು.
ಇವರು ತಮ್ಮ 3.12 ಎಕರೆ ಜಮೀನಿನಲ್ಲಿ ಮೆಕ್ಕೆಜೋಳ ಬೆಳೆದಿದ್ದರು. ತೆನೆ ಕಟ್ಟಿದ್ದ ನಿಂತಿದ್ದ ಬೆಳೆಯನ್ನು ಯಾರೋ ಕಳ್ಳತನ ಮಾಡಿದ್ದಾರೆ. ಈ ಕುರಿತು ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.