

ಗಂಗಾವತಿ: ನರೇಗಾ ಯೋಜನೆ ಸಮರ್ಪಕ ಅನುಷ್ಠಾನದಲ್ಲಿ ಕಾಯಕ ಬಂಧುಗಳ ಪಾತ್ರ ಮುಖ್ಯವಾಗಿದ್ದು, ಕಾಯ್ದೆ ಅನ್ವಯ ಕರ್ತವ್ಯ ನಿರ್ವಹಿಸಬೇಕು ಎಂದು ಪಿಡಿಒ ಸುರೇಶ ಛಲವಾದಿ ಹೇಳಿದರು.
ಇದನ್ನೂ ಓದಿ:ಹಿಮೊಫಿಲಿಯಾ ಅರಿವು, ತರಬೇತಿ ಕಾರ್ಯಾಗಾರ
ತಾಲೂಕಿನ ವಡ್ಡರಹಟ್ಟಿ ಕ್ಯಾಂಪ್‌ನ ಅರಣ್ಯ ಇಲಾಖೆ ನರ್ಸರಿಯಲ್ಲಿ ಗ್ರಾಪಂನಿಂದ ಮಂಗಳವಾರ ಹಮ್ಮಿಕೊಂಡಿದ್ದ ಕಾಯಕ ಬಂಧುಗಳಿಗಾಗಿ ತರಬೇತಿ ಕಾರ್ಯಾಗಾರಲ್ಲಿ ಮಾತನಾಡಿದರು. ಅಂತರ್ಜಲ ಮಟ್ಟ ಹೆಚ್ಚಿಸುವ ಯೋಜನೆಗಳಿಗೆ ಆದ್ಯತೆ ನೀಡಬೇಕು. ಕೆರೆ ಹಾಗೂ ನಾಲಾ ಹೂಳೆತ್ತುವ ಕಾಮಗಾರಿಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು. ದಿನಕ್ಕೆ ಎರಡು ಬಾರಿ ಕಾರ್ಮಿಕರ ಹಾಜರತಿ ಹಾಕಬೇಕು. ನಿಷ್ಠೆಯಿಂದ ಕಾರ್ಯ ನಿರ್ವಹಿಸಬೇಕಿದೆ ಎಂದರು.
ಐಇಸಿ ತಾಲೂಕು ಸಂಯೋಜಕ ಬಾಳಪ್ಪ ತಾಳಕೇರಿ ಮಾತನಾಡಿ, ನರೇಗಾ ಕಾರ್ಮಿಕರ ಕೂಲಿಯನ್ನು 370 ರೂ.ಗೆ ಹೆಚ್ಚಿಸಲಾಗಿದೆ. ಬೇಸಿಗೆಯ ಕೆಲಸದ ಅವಧಿಯಲ್ಲಿ ಶೇ.30 ರಿಯಾಯಿತಿ ನೀಡಲಾಗಿದೆ. ದುಡಿಯೋಣ ಬಾ ಮತ್ತು ಸೀ ಚೇತನ ಅಭಿಯಾನ ಆರಂಭವಾಗಿದ್ದು, ಕಾರ್ಮಿಕರಲ್ಲಿ ಜಾಗೃತಿ ಮೂಡಿಸಬೇಕಿದೆ. ಕೆಲಸಕ್ಕಾಗಿ ನಮೂನೆ 6ರ ಅರ್ಜಿ ಸಲ್ಲಿಕೆಗೆ ಪ್ರೇರಣೆ ನೀಡುವಂತೆ ಸಲಹೆ ನೀಡಿದರು. ನಂತರ ನರೇಗಾ ಜಾಗೃತಿ ಕರಪತ್ರ ವಿತರಿಸಲಾಯಿತು.
ತಾಂತ್ರಿಕ ಸಂಯೋಜಕ ಬಸವರಾಜ ಜಟಗಿ, ಗ್ರಾಪಂ ವಿಷಯ ನಿರ್ವಾಹಕರಾದ ರುದ್ರಯ್ಯಸ್ವಾಮಿ, ಆಂಜನೇಯ, ಮಹ್ಮದ್, ಸುಜಾಜಾ ಇತರರಿದ್ದರು.