ಪೂರ್ಣ ಪ್ರಮಾಣದಲ್ಲಿ ಹೆಸರು ಪರಿಪಾಲನೆ ಮಾಡಿ

WEB LOGO
Published on

ವಿಜಯಪುರ: ಡಾ. ಬಾಬಾಸಾಹೇಬ ಭೀಮರಾವ ಅಂಬೇಡ್ಕರ್​ ಹೆಸರನ್ನು ಪೂರ್ಣ ಪ್ರಮಾಣದಲ್ಲಿ ಪರಿಪಾಲನೆ ಮಾಡುವಂತೆ ಆಗ್ರಹಿಸಿ ಡಾ. ಬಿ.ಆರ್​. ಅಂಬೇಡ್ಕರ್​ ಕ್ರೀಡಾ ಸಂ ಪದಾಧಿಕಾರಿಗಳು ಇತ್ತೀಚೆಗೆ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.

ಸಂವಿಧಾನ ಶಿಲ್ಪಿ ಡಾ. ಬಿ.ಆರ್​. ಅಂಬೇಡ್ಕರರು ಪ್ರಜಾಪ್ರಭುತ್ವದ ಭಾರತ ರಾಷ್ಟ್ರಕ್ಕೆ ತಮ್ಮದೆ ಆದ ಅತ್ಯಮೂಲ್ಯ ಕೊಡುಗೆ ನೀಡಿದ ಮಹಾನಾಯಕ. ಅಂತಹ ಮಹಾನಾಯಕರ ನಾಮವನ್ನು ಡಾ. ಬಾಬಾಸಾಹೇಬ ಭೀಮರಾವ ಅಂಬೇಡ್ಕರ್​ ಕ್ರೀಡಾಂಗಣದ ವ್ಯಾಪ್ತಿಯಲ್ಲಿನ ವಿವಿಧ ಕ್ರೀಡೆಗಳ ಸ್ಥಳಕ್ಕೆ ಕೇವಲ ಒಳಾಂಗಣ ಹಾಗೂ ಹೊರಾಂಗಣ ಅಂತಾ ನಾಮಕರಣ ಮಾಡಿದ್ದು, ಅದರಿಂದ ಡಾ. ಬಾಬಾಸಾಹೇಬ ಭೀಮರಾವ ಅಂಬೇಡ್ಕರ್​ ಅವರಿಗೆ ತೋರುವ ಅಗೌರವವಾಗಿದೆ ಎಂದು ತಿಳಿಸಿದ್ದಾರೆ.

ಜಿಲ್ಲಾಡಳಿತ ಕೂಡಲೇ ಎಲ್ಲ ಕ್ರೀಡಾಕೂಟಗಳ ಸ್ಥಳಕ್ಕೆ ನಾಮಕರಣನ್ನು ಡಾ. ಬಾಬಾಸಾಹೇಬ ಭೀಮರಾವ ಅಂಬೇಡ್ಕರ್​ ಒಳಾಂಗಣ / ಹೊರಾಂಗಣ ಸ್ಥಳವೆಂದು ಪೂರ್ಣ ಪ್ರಮಾಣದಲ್ಲಿ ಪರಿಪಾಲನೆ ಮಾಡುವಂತೆ ಮತ್ತು ಸದರಿ ಕ್ರೀಡಾಕೂಟಗಳ ಸ್ಥಳಕ್ಕೆ ಡಾ. ಬಾಬಾಸಾಹೇಬ ಭೀಮರಾವ ಅಂಬೇಡ್ಕರ್​ ಒಳಾಂಗಣ/ ಹೋರಾಂಗಣ ಎಂದು ಫಲಕ ಬರೆಸುವುದು ಹಾಗೂ ಸದರಿ ಕ್ರೀಡಾಕೂಟಗಳಲ್ಲಿ ಪೂರ್ಣ ಪ್ರಮಾಣದ ಹೆಸರು ನೋಂದಾಯಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಸಂದ ಅಧ್ಯಕ್ಷ ಚಂದ್ರಕಾಂತ ತಾರನಾಳ, ವಿನೋದ ಕೋಟಿಹಾಳ, ಆಸೀಫ್​ ಬಗಲಿ, ವಿನೋದ ವ್ಯಾಸ, ದಾದಾಸಾಹೇಬ ಬಾಗಾಯತ, ವಿಲಾಸ ವ್ಯಾಸ, ಸಲ್ಮಾನ ಬಳ್ಳಾರಿ, ರವಿ ಕೊಪ್ಪದ, ಸುನೀಲ ಪಾಟೀಲ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net