ಮಣ್ಣಿನ ಆರೋಗ್ಯ ಕಾಪಾಡಿ

Untitled-1
ದೊಡ್ಡಬಳ್ಳಾಪುರ ತಾಲೂಕು ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಮಗ್ರ ಸಸ್ಯ ಪೋಷಕಾಂಶ ನಿರ್ವಹಣೆ ಕುರಿತು ತರಬೇತಿ ಆಯೋಜಿಸಲಾಗಿತ್ತು. ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನಿ ಡಾ.ಪಿ.ವೀರನಾಗಪ್ಪ, ಡಾ.ಜಿ.ಈಶ್ವರಪ್ಪ, ಡಾ.ಗೋಪಾಲ್​, ಡಾ.ಷಾಜಿಯಾ ಭಾಗವಹಿಸಿದ್ದರು.
Published on

ತೂಬಗೆರೆ: ದೊಡ್ಡಬಳ್ಳಾಪುರ ತಾಲೂಕು ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಮಗ್ರ ಪೋಷಕಾಂಶ ನಿರ್ವಹಣೆ ಕುರಿತು ತರಬೇತಿ ನಡೆಯಿತು.

ವಿವಿಧ ಗೊಬ್ಬರ ಉತ್ಪಾದನೆ ಟಕಗಳು ಹಾಗೂ ರಸಗೊಬ್ಬರ, ಕಲಬೆರಕೆ ಕಂಡು ಹಿಡಿಯುವ ವಿಧಾನ, ಮಣ್ಣು ಪರೀೆ ಬಗ್ಗೆ ತಿಳಿಸಿಕೊಡಲಾಯಿತು. ಬೆಳೆಗಳ ಉತ್ಪಾದನೆಯಲ್ಲಿ ಸಮಗ್ರ ಪೋಷಕಾಂಶಗಳ ಮಹತ್ವ, ಪೋಷಕಾಂಶ ಕೊರತೆಯ ಲಕ್ಷಣಗಳು, ಮಣ್ಣು ಪರೀೆ ಹಾಗೂ ಬೆಳೆ ಸ್ಪಂದನೆ ಪ್ರಯೋಜನ, ರಸಗೊಬ್ಬರ ನಿಯಂತ್ರಣ ಕಾಯ್ದೆಯ ಉದ್ದೇಶಗಳ ಬಗ್ಗೆ ವಿವರಿಸಲಾಯಿತು. ಕರ್ನಾಟಕದ ಕೃಷಿ ಪರಿಚಯ, ಮಣ್ಣಿನ ಉತ್ಪತ್ತಿ, ಮಣ್ಣಿನ ಪಾರ್ಶ್ವ ದೃಶ್ಯ, ಪದರಗಳು, ಮಣ್ಣಿನ ಜೈವಿಕ ಭೌತಿಕ ಹಾಗೂ ರಾಸಾಯನಿಕ ಗುಣಗಳು, ರಾಜ್ಯದ ವಿವಿಧ ರೀತಿಯ ಮಣ್ಣು, ಕೃಷಿ ಬೆಳೆಗಳಲ್ಲಿ ಪೋಷಕಾಂಶಗಳ ಪಾತ್ರ, ಪೋಷಕಾಂಶ ಪೂರೈಕೆ ಮಾಡಲು ಬೇಕಾಗುವ ಎಲ್ಲ ಸಾವಯವ ಗೊಬ್ಬರಗಳು, ರಾಸಾ ಯನಿಕ ಗೊಬ್ಬರಗಳು ಹಾಗೂ ರಾಸಾ ಯನಿಕ ಗೊಬ್ಬರಗಳ ಲೆಕ್ಕಾಚಾರ ಮತ್ತು ಸಿದ್ಧಗಣಿತ ಇವುಗಳ ಜತೆಗೆ ಮಣ್ಣಿನ ಫಲವತ್ತತೆ, ಮಣ್ಣಿನ ಆರೋಗ್ಯ ಮತ್ತು ರಸಗೊಬ್ಬರ ನಿರ್ವಹಣೆ ಕುರಿತು ವಿವರಿಸಿದ ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನಿ ಡಾ.ಪಿ.ವೀರನಾಗಪ್ಪ, ಮಣ್ಣಿನ ಆರೋಗ್ಯ ಕಾಪಾಡುವಂತೆ ಸಲಹೆಯಿತ್ತರು.

ವಿವಿಧ ರೀತಿಯ ಗೊಬ್ಬರಗಳು, ರಾಸಾಯನಿಕ ಗೊಬ್ಬರಗಳು, ನ್ಯಾನೋ ಗೊಬ್ಬರಗಳು, ರಾಸಾಯನಿಕ ಗೊಬ್ಬರಗಳಲ್ಲಿ ಕಲಬೆರಿಕೆ ಕಂಡು ಹಿಡಿಯುವ ವಿಧಾನಗಳು, ಹನಿ ನೀರಾವರಿ ತಾಂತ್ರಿಕತೆ, ಸಮಗ್ರ ಪೋಷಕಾಂಶಗಳ ನಿರ್ವಹಣೆ ಸಂವಹನ ಕೌಶಲ ಮತ್ತು ಸಾಮಾಜಿಕ ಮಾಧ್ಯಮಗಳ ಕುರಿತು ಸುದೀರ್ ಉಪನ್ಯಾಸ ನೀಡಲಾಯಿತು. 15 ದಿನಗಳ ತರಬೇತಿ ವೈಜ್ಞಾನಿಕವಾಗಿದ್ದು, ಇದರಿಂದ ಹಲವು ಮಣ್ಣು ಮತ್ತು ಗೊಬ್ಬರಗಳ ನಿರ್ವಹಣೆಯ ಜತೆ ಕ್ಷೇತ್ರ ಸಮಸ್ಯೆಗಳನ್ನು ತಿಳಿದುಕೊಳ್ಳಲಾಯಿತು ಎಂದು ಶಿಬಿರಾರ್ಥಿ ಕೃಷ್ಣಮೂರ್ತಿ ಅನುಭವ ಹಂಚಿಕೊಂಡರು.

ಸುಸ್ಥಿರ ಮಣ್ಣಿನ ನಿರ್ವಹಣೆಗೆ ಅನುಕೂಲ : ಸಸ್ಯಗಳಿಗೆ ಒಟ್ಟು 17 ಪೋಷಕಾಂಶಗಳ ಅಗತ್ಯತೆ ಇದ್ದು, ಮಣ್ಣು, ನೀರು, ಗಾಳಿ, ಗೊಬ್ಬರ ಹಾಗೂ ರಸಗೊಬ್ಬರಗಳ ಮೂಲಕ ಬೆಳೆಗೆ ಪೂರೈಕೆಯಾಗುತ್ತವೆ. ವಿವಿಧ ಮೂಲಗಳಾದ ಹಸಿರೆಲೆ ಗೊಬ್ಬರ, ಸಾವಯವ ಗೊಬ್ಬರ, ರಸ ಗೊಬ್ಬರ, ಜೈವಿಕ ಗೊಬ್ಬರಗಳು, ಪರ್ಯಾಯ ಗೊಬ್ಬರದ ಮೂಲಗಳು, ಬೆಳೆ ಉಳಿಕೆಗಳು, ಕಾರ್ಖಾನೆ ತ್ಯಾಜ್ಯಗಳು, ಬೆಳೆ ಪರಿವರ್ತನೆ, ವಿವಿಧ ರೀತಿಯ ಮಣ್ಣು ಸುಧಾರಕಗಳ ಬಳಕೆ, ಮಣ್ಣು ಮತ್ತು ತೇವಾಂಶ ಸಂರಕ್ಷಣೆ ಮೂಲಕ ಸುಸ್ಥಿರ ಮಣ್ಣಿನ ನಿರ್ವಹಣೆಗೆ ಅನುಕೂಲವಾಗುವುದು ಎಂದು ಡಾ.ಪಿ.ವೀರನಾಗಪ್ಪ ಹೇಳಿದರು.

ಭಾಗವಹಿಸಲು ಇಚ್ಛಿಸುವ ಶಿಬಿರಾರ್ಥಿಗಳು 12,500 ರೂಪಾಯಿ ಡಿಡಿ ಮೂಲಕ ಸಂಬಂಧಪಟ್ಟ ಜಿಲ್ಲೆಯ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರ ಮೂಲಕ ಕೃಷಿ ವಿಶ್ವವಿದ್ಯಾನಿಲಯಗಳಿಗೆ ಅರ್ಜಿ ಸಲ್ಲಿಸಿದರೆ 15 ದಿನಗಳ ಸರ್ಟಿಫಿಕೇಟ್​ ಕೋರ್ಸ್​ಗೆ ಸೇರುವ ಅವಕಾಶವಿದೆ. ರಸಗೊಬ್ಬರ ಹಾಗೂ ಇತರ ಗೊಬ್ಬರಗಳನ್ನು ಮಾರಾಟಮಾಡಲು ಈ ಕೋರ್ಸ್​ ಅನುಕೂಲವಾಗುತ್ತದೆ. | ಡಾ.ಬಿ.ಜಿ.ಹನುಮಂತರಾಯ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net