

ಕುಂದಗೋಳ: ತಾಲೂಕಿನ ಗುಡೇನಕಟ್ಟಿ ಗ್ರಾಮದ ಮಾರುತಿ ದೇವಸ್ಥಾನದಲ್ಲಿ ಗಣೇಶ ಹಬ್ಬ, ಈದ್- ಮಿಲಾದ್ ಹಬ್ಬದ
ನಿಮಿತ್ತ ಕುಂದಗೋಳ ಪೊಲೀಸ್ ಠಾಣೆ ಸಿಪಿಐ ಶಿವಾನಂದ ಅಬ್ಬಿಗೇರಿ ಶಾಂತಿ ಸಭೆ ನಡೆಸಿದರು.
ಸಭೆಯಲ್ಲಿ ಮಾತನಾಡಿದ ಅವರು ಹಬ್ಬ ಹರಿದಿನಗಳು ಬಂದಾಗ ಸಾರ್ವಜನಿಕರು ಶಾಂತಿ ಕಾಪಾಡಿಕೊಳ್ಳಲು ಸಹಕರಿಸಬೇಕು. ಗಣೇಶ ಹಬ್ಬ ಹಾಗೂ ಈದ್-ಮಿಲಾದ್ ಹಬ್ಬವನ್ನು ಶಾಂತಿಯಿಂದ ಆಚರಣೆ ಮಾಡಬೇಕು ಎಂದರು.
ಹಬ್ಬದ ವೇಳೆ ಸಮಾಜದಲ್ಲಿ ಉತ್ತಮ ಸೇವೆ ಸಲ್ಲಿಸಿದವರಿಗೆ ಸನ್ಮಾನಿಸುವುದು, ಗುರುಗಳಿಂದ ಪ್ರವಚನಗಳನ್ನು ನಡೆಸಬೇಕು. ಅದನ್ನು ಬಿಟ್ಟು ಡಿಜೆ ಹಚ್ಚುವುದು, ಕುಡಿಯುವುದು ಮಾಡಬಾರದು ಎಂದರು.
ಪೊಲೀಸ್ ಸಿಬ್ಬಂದಿ ಪರಮೇಶ ಗೊಂದಿ, ಮಣಿಚಂದ್ರ ಗೋನಣ್ಣವರ, ಗ್ರಾಮಸ್ಥರಾದ ಜನಸಾಬ್ ನದಾಫ್ ಶಿವಲಿಂಗಪ್ಪ ಕಳಸಣ್ಣವರ, ನೇಮನಗೌಡ ಬಸನಗೌಡ, ಶಂಕ್ರಪ್ಪ ಸಂಶಿ, ಪರಶುರಾಮ ಹೊಸಳ್ಳಿ, ಮಾಂತೇಶ ಕೆಂಚಣ್ಣವರ, ರಾಜು ಮಲ್ಲಿಗವಾಡ, ಸಕ್ರಪ್ಪ ಕಮ್ಮಾರ ಮತ್ತಿತರರು ಇದ್ದರು.