ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಳ್ಳಿ

Maintain mental health
ವಿಜಯಪುರದ ಪ್ರೋಬಸ್ ಕ್ಲಬ್‌ನಲ್ಲಿ ಹಮ್ಮಿಕೊಂಡಿದ್ದ ಹಿರಿಯ ನಾಗರಿಕರ ಸಭೆಯಲ್ಲಿ ಧರ್ಮರಾಯ ಇಂಗಳೆ ಮಾತನಾಡಿದರು. ಶಾರದಾ ಐಹೊಳ್ಳಿ, ಗುರುಪಾದ ಬಿರಾದಾರ ಮತ್ತಿತರರಿದ್ದಾರೆ.
Published on

ವಿಜಯಪುರ: ವಯಸ್ಸಾದಂತೆ ಹಲವು ತೊಂದರೆಗಳು ಬರುವುದು ಸಹಜ. ಆದರೆ, ದಿನದ ಅವಧಿಯಲ್ಲಿ ಬೆಳಗ್ಗೆ ನಿಯಮಿತ ವಾಯು ವಿಹಾರ, ಹಿತಮಿತವಾದ ಆಹಾರ ಸೇವನೆ, ಓರಿಗೆ ಅವರೊಂದಿಗೆ ಸಮಾಲೋಚನೆ ನಡೆಸಿದರೆ ಶಾರೀರಿಕವಾಗಿ, ಮಾನಸಿಕವಾಗಿ ಸ್ವಾಸ್ಥೃ ಕಾಯ್ದುಕೊಳ್ಳಲು ಸಾಧ್ಯವಾಗಿದೆ ಎಂದು ಎಸ್.ಆರ್. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಧರ್ಮರಾಯ ಇಂಗಳೆ ಹೇಳಿದರು.

ನಗರದ ಅಖಿಲ ಭಾರತ ವೀರಶೈವ ಮಹಾಸಭಾದಲ್ಲಿ ಇತ್ತೀಚೆಗೆ ಪ್ರೋಬಸ್ ಕ್ಲಬ್‌ನಲ್ಲಿ ಹಮ್ಮಿಕೊಂಡಿದ್ದ ಹಿರಿಯ ನಾಗರಿಕರ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿದಿನ ಯೋಗ, ವ್ಯಾಯಾಮ, ವಾಕಿಂಗ್ ಮಾಡುವುದು, ನಿತ್ಯವೂ ಮೂರು ನಾಲ್ಕು ಲೀಟರ್ ನೀರು ಮತ್ತು ಪೌಷ್ಟಿಕ ಆಹಾರ ಸೇವಿಸುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದು ಸಾಧ್ಯ ಎಂದು ಹೇಳಿದರು.

ಪ್ರೋಬಸ್ ಕ್ಲಬ್‌ನ ಉತ್ತರ ವಲಯದ ಅಧ್ಯಕ್ಷೆ ಶಾರದಾ ಐಹೊಳ್ಳಿ ಮಾತನಾಡಿ, ದೈಹಿಕವಾಗಿ ಸದೃಢನಾಗಿದ್ದು, ಮಾನಸಿಕವಾಗಿ ಸಮತೋಲನ ಕಾಯ್ದುಕೊಂಡು ಹೋಗುವುದು ಅವಶ್ಯ ಎಂದು ಹೇಳಿದರು.

ಗುರುಪಾದ ಬಿರಾದಾರ ಪ್ರಾರ್ಥಿಸಿದರು. ಸುಭಾಷ್ ಬೆಟಗೇರಿ ಸ್ವಾಗತಿಸಿದರು. ಮಹಾದೇವ ಹಾಲಳ್ಳಿ ನಿರೂಪಿಸಿದರು. ಜಗದೀಶ ಮೊಟಗಿ ವಂದಿಸಿದರು. ಎಸ್.ಜಿ. ನಾಡಗೌಡ, ಪರಶುರಾಮ, ಪಾರ್ವತಿ ಹೊಸುರ, ಸುಭಾಸ ಬೇಟಗೇರಿ, ಡಾ. ವಿ.ಡಿ. ಐಹೊಳ್ಳಿ, ಬಸವರಾಜ ಮೋದಿ ಕಸಬೇಗೌಡ, ರಮೇಶ ತೇಲಿ ಮತ್ತಿತರರಿದ್ದರು.’

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net