

ವಿಜಯವಾಣಿ ಸುದ್ದಿಜಾಲ ಧಾರವಾಡ
ಮಾನಸಿಕ ಆರೋಗ್ಯ ಬಹಳ ಮುಖ್ಯ. ಸದೃಢ ದೇಹದೊಂದಿಗೆ ಸದೃಢ ಮನಸ್ಸಿದ್ದಲ್ಲಿ ಯಶಸ್ಸು ನಿಶ್ಚಿತ ಎಂದು ಸಾಮಾಜಿಕ ಕಾರ್ಯಕರ್ತೆ ಓಟಿಲಿ ಅನ್ಬನಕುಮಾರ ಹೇಳಿದರು.
ನಗರದ ವನಿತಾ ಪ್ರೌಢ ಶಾಲೆಯಲ್ಲಿ ರೋಟರಿ ಕ್ಲಬ್ ಸೆಂಟ್ರಲ್ ವತಿಯಿಂದ ಇತ್ತೀಚೆಗೆ ಏರ್ಪಡಿಸಿದ್ದ ಮಹಿಳೆ ಮತ್ತು ಮಕ್ಕಳ ಮಾನಸಿಕ ಆರೋಗ್ಯದ ಕುರಿತು ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಮ್ಮ ಯುವ ಜನರು ಮತ್ತು ಮಹಿಳೆಯರಲ್ಲಿನ ಮಾನಸಿಕ ಆರೋಗ್ಯದ ನಿರ್ಣಾಯಕ ಸಮಸ್ಯೆಗಳನ್ನು ಪರಿಹರಿಸಲು ಶ್ರಮಿಸಬೇಕಿದೆ. ನಮ್ಮ ರಾಷ್ಟ್ರಕ್ಕೆ ಸದೃಢ ಮನಸ್ಸುಗಳು, ಬಲಿಷ್ಟ ಮಹಿಳೆಯರು, ತೇಜಸ್ವಿ ಮಕ್ಕಳ ಅಗತ್ಯವಿದೆ ಎಂದ ಅವರು, ಮಕ್ಕಳಿಗೆ ಪರಿಕ್ಷಾ ಭಯ, ಏಕಾಗ್ರತೆ, ಧನಾತ್ಮಕ ಮನೋಭಾವ, ನಾಯಕತ್ವದ ಗುಣ, ಆತ್ಮ ವಿಶ್ವಾಸ ಬೆಳೆಸಿಕೊಳ್ಳಲು ಕೌಶಲಗಳ ಮಾಹಿತಿ ನೀಡಿದರು.
ರೋಟರಿ ಕ್ಲಬ್ ಅಧ್ಯ ಕರಣ ದೊಡವಾಡ, ಕಾರ್ಯದರ್ಶಿ ವಾಮನ್ ಮಂತ್ರಿ, ಜಯಂತಿಲಾಲ ಜೈನ್, ಪ್ರಕಾಶ ಏರಿ, ಚೇತನ ಪಾಟೀಲ, ವನಿತಾ ಸೇವಾ ಸಮಾಜದ ಅಧ್ಯಕ್ಷ ಟಿ.ಎಲ್. ಪಾಟೀಲ, ಇತರರು ಇದ್ದರು. ಸುಮಾ ರಜಪೂತ ನಿರೂಪಿಸಿದರು.