ಸುಂಟಿಕೊಪ್ಪ: ಯಾವುದೇ ರೀತಿಯ ಸಭೆ-ಸಮಾರಂಭಗಳನ್ನು ಆಯೋಜಿಸುವಾಗ ವೇದಿಕೆಗೆ ತನ್ನದೆಯಾದ ಶಿಸ್ತು ಘನತೆಯಿದ್ದು, ಅದರ ಬಗ್ಗೆ ಅರಿತು ಆಯೋಜಿಸಿದ್ದಲ್ಲಿ ಮಾತ್ರ ಕಾರ್ಯಕ್ರಮವು ಯಶಸ್ವಿಗೊಳ್ಳಲಿದೆ ಎಂದು ಲೆಕ್ಕ ಪರಿಶೋಧಕ ಪಿ.ಡಬ್ಲ್ಯು.ಪ್ರಾನ್ಸಿಸ್ ಹೇಳಿದರು.
ಮಾದಾಪುರ ಶ್ರೀಮತಿ ಡಿ.ಚೆನ್ನಮ್ಮ ಪದವಿ ಪೂರ್ವ ಕಾಲೇಜಿನ ವತಿಯಿಂದ ಸುಂಟಿಕೊಪ್ಪ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಭಾಷಣ ಕಲೆ ವಿಷಯ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಭೆಗಳಿಗೆ ವೇದಿಕೆಯನ್ನು ಸಿದ್ಧಪಡಿಸುವಾಗ ಅಧ್ಯಕ್ಷರು ಮತ್ತು ಅತಿಥಿಗಳಿಗೆ ಸೂಕ್ತ ರೀತಿಯಲ್ಲಿ ಆಸನಗಳನ್ನು ಸಿದ್ಧಪಡಿಸುವುದರೊಂದಿಗೆ ಅತಿಥಿಗಳು ಆಸೀನರಾಗುವಂತೆ ನೋಡಿಕೊಳ್ಳುವುದು ಕಾರ್ಯಕ್ರಮದ ಆಯೋಜಕರು ನಿರ್ವಹಿಸಬೇಕಾದ ಆದ್ಯ ಕರ್ತವ್ಯವಾಗಿರುತ್ತದೆ. ಇದರಿಂದ ಸಮಾರಂಭವು ಯಶಸ್ವಿಗೊಳ್ಳುತ್ತದೆ ಎಂದು ಹೇಳಿದರು.
ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯ ಪಿ.ಎಫ್. ಸಬಾಸ್ಟೀನ್ ಮಾತನಾಡಿ, ಭಾಷಣ ಕಲೆಯನ್ನು ಕರಗತ ಮಾಡಿಕೊಂಡು ಧೈರ್ಯದಿಂದ ಮುಂದುವರಿಯಬೇಕು. ನಮ್ಮೊಳಗಿರುವ ಕಿಳರಿಮೆ ತೊಡೆದು ಹಾಕಬೇಕು. ಯಾವುದೇ ವಿಚಾರ ಮಾತನಾಡುವಾಗ ಅದರ ಪೂರ್ವಾಪರ ಆರಿತು ಮಾಹಿತಿ ಸಂಗ್ರಹಿಸಿ ಧೈರ್ಯ ಅಭಿವ್ಯಕ್ತಿ ಮಾಡಬೇಕೆಂದರು.
ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಬಿ.ಎಸ್.ಸದಾಶಿವ ರೈ ಮಾತನಾಡಿದರು. ಮಾದಾಪುರ ಶ್ರೀಮತಿ ಡಿ.ಚೆನ್ನಮ್ಮ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಮೋಹನ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.
ಕಾಲೇಜಿನ ಉಪನ್ಯಾಸಕಿ ಪ್ರಪುಲ್ಲ ಕುಮಾರಿ, ರಾ.ಸೇ.ಯೋಜನೆ ಘಟಕ ಶಿಬಿರಾಧಿಕಾರಿ ಎನ್.ಎನ್.ಮನೋಹರ್ ಉಪಸ್ಥಿತರಿದ್ದರು.