

ಹುನಗುಂದ: ಡೆಂಗ್ಯೂ ಜ್ವರ ಸೊಳ್ಳೆಯಿಂದ ವ್ಯಕ್ತಿಗೆ ಹರಡುವ ಸಾಂಕ್ರಾಮಿಕ ರೋಗವಾಗಿದೆ. ತ್ಯಾಜ್ಯ ವಸ್ತುಗಳು ನೀರಿನಲ್ಲಿ ಸೇರಿಕೊಳ್ಳುವುದರಿಂದ ನೀರು ಮಲಿನಗೊಂಡು, ಹರಿಯದೆ ಒಂದೆಕಡೆಯಲ್ಲಿ ನಿಲ್ಲುವುದರಿಂದ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಸೊಳ್ಳೆಗಳು ಕಚ್ಚುವುದರಿಂದ ಡೆಂಗ್ಯೂ ಜ್ವರ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಎಲ್ಲೆಡೆ ಸ್ವಚ್ಛತೆ ಕಾಪಾಡಿ ಎಂದು ಟಿಎಚ್‌ಒ ಎಸ್.ಎಚ್. ಅಂಗಡಿ ಹೇಳಿದರು.
ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯದಲ್ಲಿ ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ- 2025 ರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಆರೋಗ್ಯ ನಿರೀಕ್ಷಕ ಜಿ.ಬಿ. ಭದ್ರಣ್ಣವರ ಮಾತನಾಡಿ, ಹೂವಿನ ಕುಂಡಗಳು, ಬಕೆಟ್‌ಗಳು ಮತ್ತು ಬಿಸಾಡಿದ ಟೈರ್‌ಗಳಂತಹ ನೀರು ಸಂಗ್ರಹಗೊಳ್ಳುವ ವಸ್ತುಗಳನ್ನು ನಿಯಮಿತವಾಗಿ ಶುದ್ಧಗೊಳಿಸುವುದು ಮತ್ತು ನೀರು ಸಂಗ್ರಹಿಸುವ ಟ್ಯಾಂಕ್ ಮುಚ್ಚಬೇಕು. ಸರಿಯಾದ ತ್ಯಾಜ್ಯ ವಿಲೇವಾರಿ ಖಚಿತಪಡಿಸಿಕೊಂಡು, ಸೊಳ್ಳೆಗಳ ಸಂತಾನೋತ್ಪತ್ತಿ ತಾಣಗಳನ್ನು ತಪ್ಪಿಸಬೇಕು ಎಂದರು.
ಗ್ರೇಡ್-2 ತಹಸೀಲ್ದಾರ್ ಮಹೇಶ ಸಂದಿಗವಾಡ, ಮಹಾಂತೇಶ ಕಲಕುಟಗಾರ, ಸುಮಿತ್ರ ಜುಟ್ಲಾ, ಸುನಿಲ್ ಖಾಸನೀಸ್, ಮಾರ್ಗದರ್ಶನ ನಸಿರ್ಂಗ್ ಕಾಲೇಜಿನ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಇದ್ದರು.