ಡೆಂಘೆ ತಡೆಗೆ ಮನೆಯ ಸುತ್ತ ಶುಚಿತ್ವ ಕಾಪಾಡಿ

10,kkr1(8=24
ಕಿಕ್ಕೇರಿ ಕೆಪಿಎಸ್ ಪ್ರೌಢಶಾಲೆಯಲ್ಲಿ ಶುಕ್ರವಾರ ಡೆಂಗಿ ಜಾಗ್ರತಿ ಕಾರ್ಯಕ್ರಮ ನಡೆಯಿತು. ಡಾ ಸೌಜನ್ಯ, ನಾಗೇಂದ್ರ, ಎಸ್.ಎಂ. ಬಸವರಾಜು, ಬಿ.ಎನ್. ಪರಶಿವಮೂರ್ತಿ, ರಂಗಸ್ವಾಮಿ ಹಾಜರಿದ್ದರು.
Published on

ಕಿಕ್ಕೇರಿ : ಮಳೆಗಾಲದಲ್ಲಿ ಡೆಂೆಯಂತಹ ವೈರಾಣು ರೋಗ ನಿಯಂತ್ರಣಕ್ಕೆ ಪರಿಸರ ಶುಚಿತ್ವ, ನೀರಿನ ತೊಟ್ಟಿ ಶುಚಿಗೊಳಿಸಿ ಒಣಗಿಸಿ ಮರು ಬಳಸುವುದು ಮುಖ್ಯ ಎಂದು ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ. ಸೌಜನ್ಯಾ ತಿಳಿಸಿದರು.
ಇಲ್ಲಿನ ಕೆಪಿಎಸ್ ಪ್ರೌಢಶಾಲೆಯಲ್ಲಿ ಆರೋಗ್ಯ ಇಲಾಖೆ ಶುಕ್ರವಾರ ಹಮ್ಮಿಕೊಂಡಿದ್ದ ಡೆಂೆ ಜಾಗ್ರತಿ ಕಾರ್ಯಕ್ರಮದಲ್ಲಿ ಮಾತನಾಡಿ, ಮಳೆಗಾಲದ ವಾತಾವರಣದಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ಸಾಮಾನ್ಯ. ಇವುಗಳ ವಂಶಾಭಿವೃದ್ಧಿ 8-10 ದಿನಗಳು ಆಗಿದೆ. ವಾರಕ್ಕೊಮ್ಮೆ ನೀರಿನ ಸಂಗ್ರಹಣೆ ತೊಟ್ಟಿ, ಪಾತ್ರೆ, ಟ್ಯಾಂಕ್ ಶುಚಿಯೊಂದಿಗೆ ಒಣಗಿಸಿದರೆ ಸೊಳ್ಳೆಗಳ ಉತ್ಪತ್ತಿ ನಾಶವಾಗಲಿದೆ. ತ್ಯಾಜ್ಯ ವಸ್ತುಗಳು ತಮ್ಮ ಮನೆಯ ಬಳಿ ಇರದಂತೆ ಎಚ್ಚರಿಕೆ ವಹಿಸಿ ಎಂದರು.
ತೀವ್ರ ಜ್ವರ, ಕಣ್ಣಿನ ಹಿಂಭಾಗ ನೋವು, ಮಾಂಸಖಂಡ, ಕೀಲುಗಳಲ್ಲಿ ರೋಗದ ಆರಂಭಿಕ ಲಕ್ಷಣ. ಉದಾಸೀನತೆ ತೋರಿದರೆ ಬಾಯಿ, ಮೂಗು, ವಸಡಿನಲ್ಲಿ ರಕ್ತಸ್ರಾವ, ಮೈ ಊತ, ರಕ್ತದ ಒತ್ತಡ ಕುಸಿತ, ತೀವ್ರ ನಿಶಕ್ತಿ, ಕಪ್ಪು ಬಣ್ಣದ ಮಲವಿಸರ್ಜನೆ, ಬಾಯಿ ಒಣಗುವಿಕೆ, ತಣ್ಣನೆಯ ಬಿಳಿಚಿದ ಚರ್ಮ, ಜ್ಞಾನ ತಪ್ಪುವಿಕೆ ಕಾಣಿಸಿಕೊಂಡರೆ ಕೂಡಲೇ ಚಿಕಿತ್ಸೆ ಪಡೆಯಬೇಕು ಎಂದು ಸಲಹೆ ನೀಡಿದರು.

ಮುಖ್ಯಶಿಕ್ಷಕ ಎಸ್.ಎಂ. ಬಸವರಾಜು, ಆರೋಗ್ಯ ಶಿಕ್ಷಣಾಧಿಕಾರಿ ನಾಗೇಂದ್ರ, ಸಿಬ್ಬಂದಿ ರಂಗಸ್ವಾಮಿ, ಶಿಕ್ಷಕ ಬಿ.ಎನ್. ಪರಶಿವಮೂರ್ತಿ ಮುಂತಾದವರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net