ಕೆ.ಆರ್​.ಮಾರುಕಟ್ಟೆ ಸುತ್ತಮುತ್ತ ಸ್ವಚ್ಛತೆ ಕಾಪಾಡಿ: ಬಿಬಿಎಂಪಿ ಮುಖ್ಯ ಆಯುಕ್ತರ ಸೂಚನೆ

MARKET
Published on

ಬೆಂಗಳೂರು: ಕೃಷ್ಣರಾಜೇಂದ್ರ ಮಾರುಕಟ್ಟೆ ಸುತ್ತಮುತ್ತ ಪ್ರದೇಶ ಮತ್ತು ರಸ್ತೆಗಳಲ್ಲಿ ಸ್ವಚ್ಛತೆ ಕಾಪಾಡುವಂತೆ ಅಧಿಕಾರಿಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್​ರಾವ್​ ಸೂಚಿಸಿದ್ದಾರೆ.

ಭಾನುವಾರ ಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲಿಸಿದರು, ಪ್ರೆಷರ್​ ಜೆಟ್ಟಿಂಗ್​ ಯಂತ್ರ ಮೂಲಕ ಸ್ವಚ್ಛಗೊಳಿಸಬೇಕು. ಉತ್ಪತ್ತಿಯಾಗುವ ತ್ಯಾಜ್ಯವನ್ನು ಸೂಕ್ತವಾಗಿ ವಿಲೇವಾರಿ ಮಾಡಬೇಕು. ತ್ಯಾಜ್ಯ ಬಿಸಾಡದಂತೆ ನಿಗಾವಹಿಸಿ ಸ್ವಚ್ಛತೆ ಇರುವಂತೆ ನೋಡಿಕೊಳ್ಳಲು ಮಾರ್ಷಲ್​ಗಳು ಮೇಲ್ವಿಚಾರಣೆ ನಡೆಸಬೇಕು ಎಂದರು.

ವ್ಯಾಪಾರ ಮಾಡುತ್ತಿರುವವರ ಸಮೀಕ್ಷೆ ನಡೆಸಿ ಜಾಗ ಆಕ್ರಮಿಸಿಕೊಂಡು ವ್ಯಾಪಾರ ಮಾಡದಂತೆ ಅಗತ್ಯ ಕ್ರಮ ವಹಿಸಬೇಕು. ಅಂಗಡಿಗಳ ನಡುವಿನ ಅಂತರಕ್ಕೆ ನೀಲಿನಕ್ಷೆ ರೂಪಿಸಬೇಕು. ಜಪ್ತಿ ಮಾಡಿದ ವಾಹನ ತೆರವುಗೊಳಿಸಬೇಕು. ಹಲವು ದಿನಗಳಿಂದ ನಿಂತಿರುವ ವಾಹನ ಗುರುತಿಸಿ ಸಂಚಾರ ಪೊಲೀಸರ ನೆರವಿನೊಂದಿಗೆ ತೆರವುಗೊಳಿಸಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಪಶ್ಚಿಮ ವಲಯ ಆಯುಕ್ತ ಸುರಳ್ಕರ್​ ವಿಕಾಸ್​ ಕಿಶೋರ್​, ಮುಖ್ಯ ಅಭಿಯಂತರರಾದ ಲೋಕೇಶ್​, ಬಸವರಾಜ್​ ಕಬಾಡೆ, ರಾಜೇಶ್​ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net