ಸ್ವಚ್ಛತೆ ಕಾಪಾಡಿ ಪರಿಸರ ಸಂರಕ್ಷಿಸಿ

13 ckm 2
ಚಿಕ್ಕಮಗಳೂರು ಜಿಲ್ಲೆಯ ಸಾಂತವೇರಿ ಗ್ರಾಮದ ವಿದ್ಯಾನಗರ ಬಡಾವಣೆಯ ಶ್ರೀ ಕರಾಳಮ್ಮ ದೇವಿ ದೇವಾಲಯಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಹಮ್ಮಿಕೊಂಡಿರುವ ಶ್ರದ್ಧಾ ಕೇಂದ್ರಗಳ ಸ್ವಚ್ಚತಾ ಅಭಿಯಾನ ಕಾರ್ಯಕ್ರಮದಲ್ಲಿ ದೇವಾಲಯಕ್ಕೆ ಟಬ್ಬು, ಬಕೆಟ್ ಮತ್ತು ಮಾಪ್ ವಿತರಿಸಲಾಯಿತು. ಸತೀಶ್, ಸುಜಿತ, ತಮ್ಮಾಣಿ, ತೌಸಿಫ್, ರೋಹಿಣಿ, ನಿರ್ವಾಣಪ್ಪ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಪ್ರತಿಯೊಬ್ಬರೂ ತಮ್ಮ ಸುತ್ತಮುತ್ತಲಿನ ಪ್ರದೇಶದ ಸ್ವಚ್ಚತೆಯನ್ನು ಕಾಪಾಡುವ ಮೂಲಕ ಪರಿಸರವನ್ನು ಸಂರಕ್ಷಣೆ ಮಾಡುವಂತೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಲಿಂಗದಹಳ್ಳಿ ವಲಯ ಮೇಲ್ವಿಚಾರಕ ಸತೀಶ್ ತಿಳಿಸಿದರು.

ತರೀಕೆರೆ ತಾಲೂಕು ಕಾಮನದುರ್ಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂತವೇರಿ ಗ್ರಾಮದ ವಿದ್ಯಾನಗರ ಬಡಾವಣೆಯ ಶ್ರೀ ಕರಾಳಮ್ಮ ದೇವಿ ದೇವಾಲಯದ ಆವರಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಮ್ಮಿಕೊಂಡಿರುವ ಶ್ರದ್ಧಾ ಕೇಂದ್ರಗಳ ಸ್ವಚ್ಚತಾ ಅಭಿಯಾನ ಕಾರ್ಯಕ್ರಮದಲ್ಲಿ ದೇವಾಲಯಕ್ಕೆ ಟಬ್ಬು, ಬಕೆಟ್ ಮತ್ತು ಮಾಪ್ ವಿತರಿಸಿ ಮಾತನಾಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ತರೀಕೆರೆ ತಾಲೂಕಿನಾದ್ಯಂತ ಜನಪರವಾದ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ಸಂತವೇರಿ ಗ್ರಾಮದಲ್ಲಿ ಸ್ವಚ್ಚತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸ್ವಚ್ಚತಾ ಅಭಿಯಾನ ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಮನದುರ್ಗ ವಲಯದ ಸೇವಾ ಪ್ರತಿನಿಧಿ ಸುಜಿತ, ಗ್ರಾಮಸ್ಥರಾದ ತಮ್ಮಾಣಿ, ತೌಸಿಫ್, ರೋಹಿಣಿ, ಅರ್ಚಕ ನಿರ್ವಾಣಪ್ಪ ಸೇರಿದಂತೆ ಸಂಘದ ಸದಸ್ಯರು ದೇವಾಲಯದ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net