ಸ್ವಚ್ಛತೆ ಕಾಪಾಡಿ ಡೆಂಘೆ ನಿಯಂತ್ರಿಸಲಿ

29TLR1
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 3145728;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 38;
Published on

ತಲ್ಲೂರ: ಸಾರ್ವಜನಿಕರು ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಡೆಂಘೆ ನಿಯಂತ್ರಣಕ್ಕೆ ಮುಂದಾಗಬೇಕು ಎಂದು ವೆದ್ಯಾಧಿಕಾರಿ ಡಾ.ಎಸ್​.ಎಂ. ಕೋರಿಶೆಟ್ಟರ್​ ಕರೆ ನೀಡಿದರು.

ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಡೆಂಘೆ ಮತ್ತು ಮಲೇರಿಯಾ ತಡೆ ಮುಂಜಾಗತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮುದಾಯದ ಸಹಭಾಗಿತ್ವದಿಂದ ಡೆಂಘೆ ನಿಮೂರ್ಲನೆ ಸಾಧ್ಯ. ಮಳೆಗಾಲದಲ್ಲಿ ರೋಗ ಉಲ್ಬಣಗೊಳ್ಳುವ ಸಾಧ್ಯತೆಗಳಿದ್ದು, ಮನೆ ಸುತ್ತಮುತ್ತಲಿನ ಪರಿಸರದಲ್ಲಿ ಮಳೆ ನೀರು ನಿಲ್ಲದಂತೆ ಜಾಗತಿ ವಹಿಸಬೇಕು ಎಂದರು. ಸಮುದಾಯ ಆರೋಗ್ಯ ಅಧಿಕಾರಿ ವಸಂತ ಚವಾಣ ಮಾತನಾಡಿದರು. ಶುಶ್ರೂಷಾಧಿಕಾರಿ ವೀರೇಶ ದೇಮಶೆಟ್ಟಿ, ಸಮುದಾಯ ಆರೋಗ್ಯ ಅಧಿಕಾರಿ ಗೀತಾ ಪೋಳ, ಪ್ರಾಥಮಿಕ ಆರೋಗ್ಯ ಸುರಣಾಧಿಕಾರಿ ಜಿ.ಪಿ. ಹೊಂಗಲ, ಶಶಿಧರ ಉಪ್ಪಿನ, ಸವಿತಾ ಚನ್ನಮೇತ್ರಿ, ಶಂಕರ ಲಮಾಣಿ, ಮಹಾವೀರ ಜೋಡಟ್ಟಿ, ಶೋಭಾ ಚುಳಕಿ, ನೀಲವ್ವ ಬೆನಕಟ್ಟಿ, ಮಹಾದೇವಿ ಬಾರ್ಕಿ ಸೇರಿ ಆಶಾ ಕಾರ್ಯಕರ್ತೆಯರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net