ನಡೆ ನುಡಿಯಲ್ಲಿ ಪರಿಶುದ್ಧತೆ ಕಾಯ್ದುಕೊಳ್ಳಿ

gld 18-4
ಗುಳೇದಗುಡ್ಡ ಪಟ್ಟಣದ ಜಗದ್ಗುರು ಗುರುಸಿದ್ಧೇಶ್ವರ ಬೃಹನ್ಮಠದಲ್ಲಿ ನಡೆದ ಶರಣ ಸಂಗಮ ಸಮಾರಂಭದಲ್ಲಿ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಮಾತನಾಡಿದರು. ಜಗದ್ಗುರು ಬಸವರಾಜ ಪಟ್ಟದಾರ್ಯ ಮಹಾಸ್ವಾಮಿಗಳು, ನಿಯೋಜಿತ ಮಠಾಧೀಶ ಶ್ರೀ ಗುರುಬಸವ ದೇವರು, ಹುಕ್ಕೇರಿಮಠ ಶ್ರೀಸದಾಶಿವ ಶ್ರೀಗಳು ಇತರರಿದ್ದರು.
Published on

ಗುಳೇದಗುಡ್ಡ: ಭಾರತ ದೇಶ ಸಾಂಸ್ಕೃತಿಕ, ಧಾರ್ಮಿಕವಾಗಿ ಸಂಪತ್ಭರಿತವಾಗಿದೆ. ಈ ದೇಶಕ್ಕೆ ತನ್ನದೆ ಆದ ದೊಡ್ಡ ಇತಿಹಾಸವಿದೆ ಎಂದು ಮೈಸೂರು ಸುತ್ತೂರು ಮಠದ ಶ್ರೀ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಬಣ್ಣಿಸಿದರು.

ಪಟ್ಟಣದ ಜಗದ್ಗುರು ಗುರುಸಿದ್ಧೇಶ್ವರ ಬೃಹನ್ಮಠದಲ್ಲಿ ಬುಧವಾರ ಗುರುಸಿದ್ಧ ಶ್ರೀಗಳ 39ನೇ ಪುಣ್ಯಾರಾಧನೆ, ಗುರುಬಸವ ದೇವರ ಪಟ್ಟಾಭಿಷೇಕ ಮಹೋತ್ಸವದ ವಿಶೇಷ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಗದ್ಗುರು ಗುರುಸಿದ್ಧ ಪಟ್ಟದಾರ್ಯ ಮಹಾಸ್ವಾಮಿಗಳು ಈ ನಾಡಿನ ಅನೇಕ ಮಠ, ಪೀಠಗಳ ಶ್ರೀಗಳ ಸಹಪಾಠಿಗಳಾಗಿದ್ದರು. ಗುರುಸಿದ್ಧ ಶ್ರೀಗಳು ವಿದ್ವತ್ತಿಗೆ ಹೆಸರಾಗಿದ್ದವರು. ಅನೇಕ ಭಾಷೆಗಳ ಪಂಡಿತರಾಗಿದ್ದರು. ದೇಶ ವಿದೇಶಗಳಲ್ಲಿ ಸಂಚರಿಸಿ ಧಾರ್ಮಿಕ ಪ್ರಜ್ಞೆ ಮೂಡಿಸಿದ್ದಾರೆ. ಒಂದು ಮಠ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕವಾಗಿ ಎಷ್ಟೆಲ್ಲ ಸಾಧನೆ ಮಾಡಲು ಸಾಧ್ಯ ಎಂಬುದನ್ನು ಈ ಗುರುಸಿದ್ಧೇಶ್ವರ ಬೃಹನ್ಮಠ ತೋರಿಸಿಕೊಟ್ಟಿದೆ ಎಂದರು.

ನಡೆ ನುಡಿಯಲ್ಲಿ ಪರಿಶುದ್ಧತೆ ಕಾಯ್ದುಕೊಂಡರೆ ಈ ನಾಡಿನ, ದೇಶದ ಪ್ರತಿಯೊಬ್ಬ ಮನುಷ್ಯನ ಬದುಕು ಕೂಡ ಆದರ್ಶವಾಗಿ ಬೆಳಗುತ್ತದೆ. ಅದನ್ನೆ ಬಸವಣ್ಣವರು ಮನುಷ್ಯನಿಗೆ ತೋರಿಸಿಕೊಟ್ಟಿದ್ದಾರೆ. ಇದರಿಂದ ಇಡೀ ಜಗತ್ತು ಸುಖಮಯವಾಗಿ ಇರಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಜಗದ್ಗುರು ಬಸವರಾಜ ಪಟ್ಟದಾರ್ಯ ಮಹಾಸ್ವಾಮಿಗಳು, ನಿಯೋಜಿತ ಮಠಾಧೀಶ ಶ್ರೀ ಗುರುಬಸವ ದೇವರು, ಹುಕ್ಕೇರಿಮಠ ಶ್ರೀಸದಾಶಿವ ಶ್ರೀಗಳು, ರುದ್ರಾಕ್ಷಿಮಠದ ಡಾ. ಅಲ್ಲಮಪ್ರಭು ಶ್ರೀಗಳು, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಅಶೋಕ ಬರಗುಂಡಿ, ನವಲಿಂಗ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net