ರಾಜಸ್ವ ತೆರಿಗೆಯಲ್ಲಿ ರಿಯಾಯಿತಿ ಕಲ್ಪಿಸಿ - ಕುಳಾಲು ಸುಭಾಶ್ಚಂದ್ರ ಶೆಟ್ಟಿ ಆಗ್ರಹ

Published on

ಪುತ್ತೂರು: ಕೆಂಪುಕಲ್ಲು ಗಣಿಗಾರಿಕೆಗಾಗಿ ರಾಜಸ್ವ ತೆರಿಗೆಯಲ್ಲಿ ಶೇ.೫೦ರಷ್ಟು ರಿಯಾಯಿತಿ, ಪರವಾನಗಿ ಪ್ರಕ್ರಿಯೆಯಲ್ಲಿ ಸಡಿಲಿಕೆ ಮಾಡುವ ಮೂಲಕ ಕಾನೂನುಬದ್ಧ ಗಣಿಗಾರಿಕೆಗೆ ಅವಕಾಶ ಕಲ್ಪಿಸಬೇಕು. ಕೇರಳ ಮಾದರಿಯಂತೆ ತತ್ವಾಧಾರಿತ ತೆರಿಗೆ ವ್ಯವಸ್ಥೆ ಜಾರಿಗೆಗೊಳಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ರಾಜೀವ್ ಗಾಂಽ ಪಂಚಾಯತ್‌ರಾಜ್ ಸಂಘಟನೆ ಅಧ್ಯಕ್ಷ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಆಗ್ರಹಿಸಿದ್ದಾರೆ.

ಜಿಲ್ಲೆಯಲ್ಲಿ ಕೋಮುದ್ವೇಷ ಪ್ರಕರಣ ಹಾಗೂ ಗುಂಪು ಹತ್ಯೆಗಳ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಕಠಿಣ ಕ್ರಮ ಕೈಗೊಂಡಿದ್ದು, ಹೊಸ ಪೊಲೀಸ್ ಅಽಕಾರಿಗಳನ್ನು ನೇಮಕ ಮಾಡಿತ್ತು. ಇದರ ಪರಿಣಾಮವಾಗಿ ಅಕ್ರಮ ಗಣಿಗಾರಿಕೆ ಹಾಗೂ ಮರಳು ದಂಧೆ ಸ್ಥಗಿತಗೊಂಡಿದೆ. ಕಾನೂನುಬದ್ಧ ಗಣಿಗಾರಿಕೆ ಮೇಲೆ ಈಗಿನ ಕಟ್ಟುನಿಟ್ಟಿನ ಕ್ರಮಗಳಿಂದ ಪರಿಣಾಮ ಬೀರುತ್ತಿದ್ದು, ಗಣಿಗಾರಿಕೆ ಉದ್ಯಮದಲ್ಲಿ ತೊಡಗಿರುವ ಹಲವಾರು ಸಣ್ಣ, ಮಧ್ಯಮ ಗಣಿ ಉದ್ಯಮಿಗಳು ಕಂಗೆಟ್ಟು ಹೋಗಿರುವ ಸ್ಥಿತಿ ಉಂಟಾಗಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಯಾವುದೇ ಹೊಸ ನಿಯಮಗಳು ಜಾರಿಗೆ ಬಂದಿಲ್ಲ. ಎಲ್ಲವೂ ಹಿಂದಿನ ಬಿಜೆಪಿ ಸರ್ಕಾರಗಳ ಕಾಲದಲ್ಲಿ ಜಾರಿಯಲ್ಲಿದ್ದ ನಿಯಮಗಳೇ ಆಗಿವೆ. ಆದರೆ ಈಗ ಆ ನಿಯಮಗಳ ಅನುಷ್ಠಾನದಲ್ಲಿ ನಿರ್ಧಾರಾತ್ಮಕತೆ ಮತ್ತು ಕಠೋರತೆ ಬಂದಿದೆ ಎಂದು ತಿಳಿಸಿದ್ದಾರೆ.

ಕಾನೂನಾತ್ಮಕ ಗಣಿಗಾರಿಕೆಗಳಿಗೆ ಅನೇಕ ಅಡಚಣೆಗಳು ಎದುರಾಗುತ್ತಿವೆ. ಹೆಚ್ಚಿನ ರಾಜಸ್ವ ತೆರಿಗೆ, ಪರವಾನಗಿ ಪ್ರಕ್ರಿಯೆಯ ಗೊಂದಲ ಇತ್ಯಾದಿಯಿಂದ ಸಕಾರಾತ್ಮಕ ಕೆಲಸಕ್ಕೂ ತಡೆ ಉಂಟಾಗಿದೆ. ಇದರಿಂದ ಗಣಿ ಕಾರ್ಮಿಕರು, ಗುತ್ತಿಗೆದಾರರು, ಸಣ್ಣ ಕಟ್ಟಡ ಕಾರ್ಮಿಕರು ಮತ್ತು ಇತರೆ ನೆರವಿನ ಉದ್ಯಮಗಳ ಜೀವನೋಪಾಯದ ಮೇಲೆ ಪರಿಣಾಮ ಬಿದ್ದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net