

ಕಂಪ್ಲಿ: ತಾಲೂಕಿನ ರೆಗ್ಯುಲೇಟರ್‌ಕ್ಯಾಂಪ್ ಬಳಿ ಹೊಸೂರು ಜವುಕಿನ ಸಹಿಪ್ರಾ ಶಾಲೆ ಪ್ರಭಾರ ಮುಖ್ಯಶಿಕ್ಷಕ ಶಂಕರಲಿಂಗಪ್ಪ ಉಪ್ಪಿನಮೇಟಿಗೌಡ್ರು ಗದಗ ಜಿಲ್ಲೆಯ ಆದರಳ್ಳಿಗೆ ವರ್ಗಗೊಂಡಿದ್ದರಿಂದ ಗ್ರಾಮಸ್ಥರು, ವಿದ್ಯಾರ್ಥಿಗಳು ಭಾವಪೂರ್ಣ, ಗೌರವಾಧರಗಳೊಂದಿಗೆ ಶುಕ್ರವಾರ ಬೀಳ್ಕೊಟ್ಟರು.
ವರ್ಗಗೊಂಡ ಮುಖ್ಯಶಿಕ್ಷಕ ಶಂಕರಲಿಂಗಪ್ಪ ಉಪ್ಪಿನಮೇಟಿಗೌಡ್ರು ಮಾತನಾಡಿ, 15ವರ್ಷಗಳಿಂದ ಶಾಲೆಯಲ್ಲಿ ಸೇವೆ ಸಲ್ಲಿಸಿದ ನೆನಪಿಗಾಗಿ ತಮ್ಮ ತಂದೆ ತಾಯಿಗಳಾದ ಸುವರ್ಣ ಬಸವಂತಪ್ಪ ಉಪ್ಪಿನಮೇಟಿಗೌಡ್ರು ಹೆಸರಿನಲ್ಲಿ 25ಸಾವಿರ ರೂ. ಠೇವಣಿ ಇರಿಸಿ, ಬಂದ ಬಡ್ಡಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ನೀಡಲಾಗುವುದು ಎಂದರು.
ಇದನ್ನೂ ಓದಿ: ಸಮಾಜದ ಏಳಿಗೆಗೆ ಸಂಘಟನಾತ್ಮಕವಾಗಿ ಶ್ರಮಿಸಿ
ಶಾಲೆಯಿಂದ ಗ್ರಾಮದ ಅಯ್ಯಪ್ಪಸ್ವಾಮಿ ಗುಡಿಯವರೆಗೆ ಟ್ರ್ಯಾಕ್ಟರ್‌ನಲ್ಲಿ ವರ್ಗಗೊಂಡ ಮುಖ್ಯಶಿಕ್ಷಕ ಶಂಕರಲಿಂಗಪ್ಪ ಉಪ್ಪಿನಮೇಟಿಗೌಡ್ರ ಅವರನ್ನು ಮೆರವಣಿಗೆ ಮಾಡಲಾಯಿತು.
ಎಸ್‌ಡಿಎಂಸಿ ಅಧ್ಯಕ್ಷೆ ಪಾರ್ವತಿ ಅಂಜಿನಪ್ಪ, ಉಪಾಧ್ಯಕ್ಷ ಭೀಮೇಶ, ಗ್ರಾಮದ ಮುಖಂಡರಾದ ಪಂಪಾಪತಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎ.ಎನ್.ಸುಧಾಕರ, ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಎಂ.ಎ.ನಾಗನಗೌಡ, ರೇವಣಸಿದ್ದೇಶ, ಗುರುಬಸವರಾಜ, ಮುಖ್ಯಶಿಕ್ಷಕ ಎಚ್.ಪಿ.ಸೋಮಶೇಖರ ಇತರರಿದ್ದರು.