

ರೋಣ: ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ತಾಲೂಕಿನ ಚಿಕ್ಕಮಣ್ಣೂರು ಹಾಗೂ ಸಂದಿಗವಾಡ ನಡುವಿನ ಹಿರೇಹಳ್ಳವು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ರೋಣ- ನರಗುಂದ ಮುಖ್ಯ ರಸ್ತೆ ಹಾಗೂ ಹುಲ್ಲೂರು ಗ್ರಾಮದಿಂದ ಮುದೇನಗುಡಿ ಗ್ರಾಮದ ಸಂಪರ್ಕ ಕೊಚ್ಚಿಕೊಂಡು ಹೋಗಿದೆ. ನರಗುಂದ- ರೋಣ ಮುಖ್ಯ ರಸ್ತೆಯಲ್ಲಿ ಸಿಲಿಂಡರ್ ತುಂಬಿದ್ದ ಲಾರಿಯೊಂದು ಸಿಲುಕಿದೆ. ಹಳ್ಳದ ನೀರು ಸುತ್ತಲಿನ ಜಮೀನಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಭಾನುವಾರ ಸಂಜೆ ಆರಂಭವಾದ ಮಳೆ ರಾತ್ರಿ ಇಡೀ ನಿರಂತರವಾಗಿ ಸುರಿದಿದೆ. ತಾಲೂಕಿನ ಯಾವಗಲ್ಲ ಗ್ರಾಮದ ಬೆಣ್ಣೆಹಳ್ಳ ಹೂಳು ತುಂಬಿದ ಪರಿಣಾಮ ನೀರು ಸೇತುವೆ ಮೇಲೆ ಹರಿಯುತ್ತಿದೆ.4 ರೋಣ 2- ರೋಣ ತಾಲೂಕಿನ ಚಿಕ್ಕಮಣ್ಣೂರ- ಸಂದಿಗವಾಡ ಮಧ್ಯದ ಹಿರೇಹಳ್ಳ ಅಪಾಯಮಟ್ಟ ಮೀರಿ ಹರಿದ ಪರಿಣಾಮ ಹಳ್ಳದಲ್ಲಿ ಲಾರಿ ಸಿಲುಕಿರುವುದು.