ಮುಖ್ಯರಸ್ತೆಯ ಬೀದಿಗೆ ಬಂದ್ರೆ ನೀನು, ನಿನ್ನ ಮನೆಗೆ ಬರುವೆ ನಾನು-ಕೊರನಾ !

Corona Awarness Painting on Road
Published on

ರಾಯಚೂರು: ಕರೊನಾ ಮಹಾಮಾರಿ ಬಗ್ಗೆ ಜನ ಎಚ್ಚೆತ್ತುಕೊಳ್ಳದೆ ರಸ್ತೆಯಲ್ಲಿ ಯರ‌್ರಾಬಿರ‌್ರಿ ನಡೆದಾಡುವುದಕ್ಕೆ ಸ್ವಯಂ ಕಡಿವಾಣ ಹಾಕಿಕೊಳ್ಳುತ್ತಿಲ್ಲ. ಪೊಲೀಸರು ಲಾಠಿ ಬೀಸಿದರೆ ಮಾತ್ರ ಆ ಕಡೆ ಹೋಗದಂತೆ ಮತ್ತೊಂದು ಅಡ್ಡದಾರಿ ಹಿಡಿಯುತ್ತಿದ್ದಾರೆ. ಇಂಥವರಿಗೆ ಎಚ್ಚರಿಸಲು ಅಮರೇಗೌಡ ನೇತೃತ್ವದ ಕಲಾವಿದರ ತಂಡ ಜಿಲ್ಲಾಡಳಿತದ ಅನುಮತಿ ಮೇರೆಗೆ ರಾಯಚೂರಿನ ಸೂಪರ್ ಮಾರ್ಕೆಟ್ ವೃತ್ತದ ಮುಖ್ಯರಸ್ತೆಯಲ್ಲಿ ಬೀದಿಗೆ ಬಂದ್ರೆ ನೀನು, ನಿನ್ನ ಮನೆಗೆ ಬರುವೆ ನಾನು ಎಂದು ಬರೆದು, ಕರೊನಾ ವೈರಾಣು ಚಿತ್ರ ಹಾಕಿ ಅರಿವು ಮೂಡಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net