ಹಾಲು ಉತ್ಪಾದನೆಯಲ್ಲಿ ಮೈಮುಲ್‌ಗೆ 4ನೇ ಸ್ಥಾನ

IMG-20250914-WA0067
ಪಿ.ಬಸವನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಹಾಲು ಉತ್ಪಾದಕರು ಹಾಗೂ ಇತರರನ್ನು ಸನ್ಮಾನಿಸಲಾಯಿತು. ಬಿ.ಎ. ಪ್ರಕಾಶ್, ನಾಗೇಗೌಡ. ಶಿವಕುಮಾರ್,ಶ್ರೀ ಕಾಂತ್,ನಿತೀಶ್,ನಿಶ್ಚಿತ್,ಪ್ರಕಾಶ್,ಜಯಮ್ಮ,ಕಾಳೇಗೌಡ,ರಾಮಚಂದ್ರ, ಮೋಹನ್ ಕುಮಾರ್ ಇತರರು ಇದ್ದರು.
Published on

ಬೈಲುಕುಪ್ಪೆ : ಗುಣಮಟ್ಟದ ಹಾಲು ಉತ್ಪಾದನೆಯಲ್ಲಿ ಮೈಸೂರು ಒಕ್ಕೂಟ 4ನೇ ಸ್ಥಾನ ಪಡೆದುಕೊಂಡಿದೆ ಎಂದು ಮೈಸೂರು ಹಾಲು ಒಕ್ಕೂಟದ ನಿರ್ದೆಶಕ ಬಿ.ಎ.ಪ್ರಕಾಶ್ ತಿಳಿಸಿದರು.

ಪಿರಿಯಾಪಟ್ಟಣ ತಾಲೂಕಿನ ಪಿ.ಬಸವನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ 2024-25 ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ರಾಜ್ಯ ಸರ್ಕಾರದ ವತಿಯಿಂದ ಲೀಟರ್ ಒಂದಕ್ಕೆ 9 ರೂ. ಜಮಾವಣೆ ಮಾಡುತ್ತಿರುವ ಸರ್ಕಾರ ನಮ್ಮದಾಗಿದೆ. ರಾಜ್ಯದಲ್ಲಿ 16 ಹಾಲು ಒಕ್ಕೂಟಗಳು ಕಾರ್ಯನಿರ್ವಹಿಸುತ್ತಿದ್ದು. ಇದರಲ್ಲಿ ಬೆಂಗಳೂರು ಗ್ರಾಮಾಂತರ ತುಮಕೂರು ಮಂಡ್ಯ ಪ್ರಥಮ ಮೂರನೇ ಸ್ಥಾನದಲ್ಲಿ ಇದ್ದರೆ ಮೈಸೂರು ನಾಲ್ಕನೇ ಸ್ಥಾನದಲ್ಲಿದೆ. ದಕ್ಷಿಣ ಕನ್ನಡ ಬಿಟ್ಟರೆ ಲೀಟರ್ ಹಾಲಿಗೆ ಅತಿ ಹೆಚ್ಚು ಬೆಲೆಯನ್ನು ಉತ್ಪಾದಕರಿಗೆ ಒಕ್ಕೂಟದ ವತಿಯಿಂದ ನೀಡುತ್ತಿದೆ. ಪಿರಿಯಾಪಟ್ಟಣ ತಾಲೂಕಿನಿಂದ ನಿತ್ಯ 1. 80 ಲಕ್ಷ ಲೀಟರ್ ಹಾಲು ಒಕ್ಕೂಟಕ್ಕೆ ಸರಬರಾಜು ಆಗುತ್ತಿದ್ದು ಜಿಲ್ಲೆಗೆ ಪ್ರಥಮ ಸ್ಥಾನದಲ್ಲಿದೆ ಎಂದು ತಿಳಿಸಿದರು.

ರೈತರ ಸಮಸ್ಯೆಗೆ ಬಗೆಹರಿಸುವುದೇ ಒಕ್ಕೂಟದ ಗುರಿ. ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿದೆ. ಪಶು ಆಹಾರ ಔಷಧ ಹೆಚ್ಚಾಗಿದೆ, ಹೀಗಾಗಿ ಹೈನುಗಾರಿಕೆಗೆ ಪ್ರೋತ್ಸಾಹ ಸಿಗಬೇಕಾದರೆ ಗ್ರಾಹಕರ ಹಾಲಿನ ದರವು ಹೆಚ್ಚಾಗಬೇಕಾಗಿದೆ. ರೈತರು ಹೈನುಗಾರಿಕೆಯನ್ನು ಉಪ ಕಸುಬಾಗಿ ಪರಿಗಣಿಸಬೇಕು ಎಂದರು.

ಒಕ್ಕೂಟ ಬೆಳೆಯಲು ಶೇಖರಣೆ ಅಷ್ಟೇ ಸಾಲದು, ಹಾಲಿನ ಗುಣಮಟ್ಟದ ಜತೆ ನಂದಿನಿ ಉತ್ಪನ್ನಗಳನ್ನೇ ಬಳಸುವಂತೆ ಜನರಲ್ಲಿ ಅರಿವು ಮೂಡಿಸಬೇಕಾಗಿದೆ. ಒಕ್ಕೂಟದಿಂದ ರೈತರಿಗೆ ಅನೇಕ ಸೌಲಭ್ಯಗಳು ದೊರೆಯುತ್ತಿವೆ. ಅದನ್ನು ಎಲ್ಲರೂ ಸದ್ಬಳಕೆ ಮಾಡಿಕೊಳ್ಳಿ ಎಂದು ಹೇಳಿದರು.

ಸಂಘದ ಅಧ್ಯಕ್ಷ ನಾಗೇಗೌಡ ಉಪಾಧ್ಯಕ್ಷ ಶಿವಕುಮಾರ್. ಒಕ್ಕೂಟದ ವಿಸ್ತರಣಾಧಿಕಾರಿಗಳಾದ ಶ್ರೀಕಾಂತ್, ನಿಶ್ಚಿತ್, ಸತೀಶ್, ಡಾ, ಸತೀಶ್, ನಿರ್ದೇಶಕರಾದ ಬಿ.ಎ. ಪ್ರಕಾಶ್, ಜಯಮ್ಮ, ಗಣೇಶ್, ಕಮಲಾಕ್ಷಮ್ಮ, ಕಾಳೇಗೌಡ, ರಾಮಚಂದ್ರ, ಪುಟ್ಟೇಗೌಡ, ಮಹೇಶ್, ಕಾಳಮ್ಮ, ರಾಮನಾಯಕ, ಪ್ರತಾಪ್ ಕುಮಾರ್, ಕಾರ್ಯನಿರ್ವಹಣಾಧಿಕಾರಿ ಮೋಹನ್ ಕುಮಾರ್, ಸಿಬ್ಬಂದಿ ಧನರಾಜು, ರಮೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net