ಚಕ್ಕಡಿ ಓಡಿಸುವ ಸ್ಪರ್ಧೆಯಲ್ಲಿ ಮೈಲಾರಲಿಂಗೇಶ್ವರ ಜೋಡಿ ಪ್ರಥಮ

NVL CHAKKADI SPARDE
Published on

ನವಲಗುಂದ: ಶ್ರೀ ಅಜಾತನಾಗಲಿಂಗ ಸ್ವಾಮಿ ಜಾತ್ರಾ ಮಹೋತ್ಸವ ಅಂಗವಾಗಿ ಎನ್.ಎಚ್. ಕೋನರಡ್ಡಿ ಅಭಿಮಾನಿ ಬಳಗದ ವತಿಯಿಂದ ಪಟ್ಟಣದಲ್ಲಿ ಏರ್ಪಾಟಾಗಿದ್ದ ಜೋಡೆತ್ತುಗಳ ಚಕ್ಕಡಿ ಓಡಿಸುವ ಸ್ಪರ್ಧೆ ನೆರೆದಿದ್ದವರ ಮೈ ನವಿರೇಳಿತು.

ಗೊನಗನೂರ ಗ್ರಾಮದ ಮೈಲಾರಲಿಂಗೇಶ್ವರ ಜೋಡಿ ಪ್ರಥಮ, ಹುಂಚಾಳ ಗ್ರಾಮದ ಬಸವೇಶ್ವರ ಅಂಬರೇಶ ದ್ವಿತೀಯ, ಕೆಲಗೇರಿಯ ಶರಣ ಬಸವೇಶ್ವರ ತೃತೀಯ, ಹದಲಿ ಗ್ರಾಮದ ದುರ್ಗಾದೇವಿ ಪ್ರಸನ್ನಾ ಚತುರ್ಥ ಹಾಗೂ ಜಿಗಳೂರ ಗ್ರಾಮದ ಕ್ರಾಂತಿವೀರ ಸಾಮ್ರಾಜ್ಯ ಪಂಚಮ ಸ್ಥಾನ ಪಡೆದು ಬಹುಮಾನ ಪಡೆದುಕೊಂಡವು.

ಇದಕ್ಕೂ ಮುನ್ನ ಜೋಡೆತ್ತುಗಳ ಚಕ್ಕಡಿ ಓಡಿಸುವ ಸ್ಪರ್ಧೆಗೆ ಶಾಸಕ ಎನ್.ಎಚ್. ಕೋನರಡ್ಡಿ ಚಾಲನೆ ನೀಡಿದರು.

ರವಿ ಕಪ್ಪತ್ತನವರ, ನವಲಗುಂದ ಪುರಸಭೆ ಅಧ್ಯಕ್ಷ ಶಿವಾನಂದ ತಡಸಿ, ಸ್ಥಾಯಿ ಸಮಿತಿ ಅಧ್ಯಕ್ಷ ಹನುಮಂತಪ್ಪ ವಾಲಿಕಾರ, ಜೀವನ ಪವಾರ, ಮಹಾಂತೇಶ ಭೋವಿ, ಆನಂದ ಹವಳಕೊಡ, ಯುತ್ ಕಾಂಗ್ರೆಸ್ ಅಧ್ಯಕ್ಷ ವಿಕಾಸ ತದ್ದೆವಾಡಿ, ಚಕ್ಕಡಿ ಓಡಿಸುವ ಸ್ಪರ್ಧೆಯ ಸಂಘಟಕರಾದ ಸಿದ್ದಪ್ಪ ಹೂಗಾರ, ಮುತ್ತಪ್ಪ ಹೂಗಾರ, ಉಮೇಶ ದೋಟಿಕಲ್, ಮುತ್ತು ಡಾಲೀನ, ಆನಂದ ಡಾಲೀನ, ಭೀಮಶಿ ಹೊಸಮನಿ, ಈರಣ್ನ ಹೊಸಮನಿ, ಶಿವಪ್ಪ ಕಟ್ಟಿ, ನಾಗರಾಜ ಹರಿವಾಳದ, ಕುಬೇರ ಡಾಲೀನ, ನಿಂಗಪ್ಪ ತೋಟಪ್ಪನವರ, ನವೀನ ಹೊಸಗೌಡ್ರ, ಪ್ರಕಾಶ ಗೊಂದಳೆ ಹಾಗೂ ಕೋನರಡ್ಡಿ ಅಭಿಮಾನಿ ಬಳಗದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net