ಮೈಲಾರಲಿಂಗೇಶ್ವರ ಕಾರ್ಣಿಕ ಅ. 2ರಂದು

IMG-20250928-WA0009.jpg
Published on

ಹುಬ್ಬಳ್ಳಿ: ತಾಲೂಕಿನ ಅಮರಗೋಳದ ಅಧ್ಯಾಪಕನಗರದಲ್ಲಿರುವ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ 28ನೇ ವರ್ಷದ ಶ್ರೀ ಮಾಲತೇಶ ಸ್ವಾಮಿಯ ದಸರಾ ಮಹೋತ್ಸವ ಏರ್ಪಡಿಸಲಾಗಿದ್ದು, ಅ. 2ರಂದು ಸಂಜೆ 5ಕ್ಕೆ ಕಾರ್ಣಿಕೋತ್ಸವ ನಡೆಯಲಿದೆ.

ದಸರಾ ಅಂಗವಾಗಿ ಸೆ. 30ರಂದು ದುರ್ಗಾಷ್ಟಮಿ, ಅ. 1ರಂದು ಮಹಾನವಮಿ, ಅ. 2ರಂದು ವಿಜಯದಶಮಿ ನಿಮಿತ್ತ ಬೆಳಗ್ಗೆ 11.15ಕ್ಕೆ ಗ್ರಾಮದಲ್ಲಿ ಪಲ್ಲಕ್ಕಿ ಉತ್ಸವ, ಮಧ್ಯಾಹ್ನ 3ಕ್ಕೆ ಜಾತ್ರಾ ಮಹೋತ್ಸವ, ಸಂಜೆ 5.15ಕ್ಕೆ ಗುರುಗಳ ಆಶೀರ್ವಾದದಿಂದ ಕಾರ್ಣಿಕೋತ್ಸವ ನಂತರ ಪವಾಡ, ಬನ್ನಿ ಮುಡಿಯುವ ಕಾರ್ಯಕ್ರಮ, ಅನ್ನಸಂತರ್ಪಣೆಗಳು ನಡೆಯಲಿವೆ.

ಭಕ್ತರು ಪಾಲ್ಗೊಳ್ಳಬೇಕೆಂದು ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನ ಕಮಿಟಿ ಪ್ರಕಟಣೆಯಲ್ಲಿ ಕೋರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net