ಮಹಿಷವಾಡಗಿ ಮಹಿಮೆ ಅನನ್ಯ

11Ndr1
Published on

ನಂದೇಶ್ವರ: ಜೈನ ಧರ್ಮದ ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಹಾಗೂ 7 ಜೈನ ಮುನಿಗಳಿಗೆ ಜನ್ಮ ನೀಡಿದ ಅಥಣಿ ತಾಲೂಕಿನ ಮಹಿಷವಾಡಗಿ ಗ್ರಾಮದ ಕೊಡುಗೆ ಅಪಾರವಾಗಿದೆ ಎಂದು ಹಳಿಂಗಳಿ ಭದ್ರಗಿರಿ ಬೆಟ್ಟದ ಆಚಾರ್ಯರತ್ನ ಶ್ರೀ 108 ಕುಲರತ್ನಭೂಷಣ ಮಹಾರಾಜರು ಹೇಳಿದರು.

ಸಮೀಪದ ಮಹಿಷವಾಡಗಿ ಗ್ರಾಮದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಪಂಚಕಲ್ಯಾಣ ಮಹೋತ್ಸವದ ಪೂರ್ವಭಾವಿ ಸಭೆ ಹಾಗೂ ವಿವಿಧ ಸವಾಲ ಸ್ವೀಕರಿಸುವ ಕಾರ್ಯಕ್ರಮದಲ್ಲಿ ಮಾತನಾಡಿ, ಪಂಚ ಕಲ್ಯಾಣ ಮಹೋತ್ಸವ ಮೇ1ರಂದು 5ರ ವರೆಗೆ ಜರುಗಲಿದೆ. ಜತೆಗೆ ಸಿದ್ದಸಾಗರ ಮಹಾರಾಜರ ಸ್ಮಾರಕ ಉದ್ಘಾಟನೆ ಹಾಗೂ ಮೂರ್ತಿ ಪ್ರತಿಷ್ಠಾಪಿಸಲಾಗುವುದು. ಇವರ ಸ್ಮರಣೆ ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ಮುಖಂಡರಾದ ಬಾಬಾಸಾಹೇಬ ಪಾಟೀಲ, ವಿವೇಕ ಯಲಗುದ್ರಿ, ಅಶೋಕ ಮುಗ್ಗನವರ, ಅರುಣ ಯಲಗುದ್ರಿ, ಬಸಗೊಂಡ ಮುಗ್ಗನವರ, ವರ್ಧಮಾನ ಯಲಗುದ್ರಿ, ಲಕ್ಷ್ಮಣ ಚಿಪ್ಪಾಡಿ, ಡಾ. ಸತೀಶ ಮುಗ್ಗನವರ, ಬುಜಬಲಿ ರೇಗೌಡ, ಮಹಾವೀರ ಶಿರಹಟ್ಟಿ, ಜಿನ್ನಪ್ಪ ನಂದಗಾಂವ, ಬಾಹುಬಲಿ ಅಜ್ಜಪ್ಪಗೋಳ, ಅಶೋಕ ಶಿರಹಟ್ಟಿ, ರಾಯಪ್ಪ ಅಜ್ಜಪ್ಪಗೋಳ, ಅಶೋಕ ಹಳಿಂಗಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net