ಮಹಿಷ ಫೋಟೋ ತೆರುವು

Mahishasura
Published on

ಮೈಸೂರು: ಮಹಿಷಾ ದಸರಾ ವಿವಾದದ ಹಿನ್ನೆಲೆಯಲ್ಲಿ ಜಾಹಿರಾತು ಫಲಕದಲ್ಲಿದ್ದ ಮಹಿಷ ಫೋಟೋವನ್ನು ರಾತ್ರೋರಾತ್ರಿ ತೆರುವು ಮಾಡಲಾಗಿದೆ.


ಅರಣ್ಯ ಇಲಾಖೆ ವತಿಯಿಂದ ಚಾಮುಂಡಿ ಬೆಟ್ಟದ ವಿವಿಧ ಸ್ಥಳಗಳಲ್ಲಿ ಹಾಕಲಾಗಿದ್ದ ಜಾಹಿರಾತು ಫಲಕಗಳಲ್ಲಿ ಮಹಿಷಾಸುರ ಚಿತ್ರದ ಮೂಲಕ ಮಾಲಿನ್ಯ ನಿಯಂತ್ರಣ ಸಂಬಂಧ ಜನರಿಗೆ ಜಾಗೃತಿ ಮೂಡಿಸುವ ಜಾಹಿರಾತು ಹಾಕಲಾಗಿತ್ತು.

ಮನುಷ್ಯರು ಮಾಲಿನ್ಯಾಸುರ ಆಗದಿರಿ ಎಂದು ಜಾಹಿರಾತು ಫಲಕ ಹಾಕಿ ಈ ಮೂಲಕ ಚಾಮುಂಡಿಬೆಟ್ಟಕ್ಕೆ ಬರುವ ಪ್ರವಾಸಿಗರಿಗೆ ಜಾಗೃತಿ ಮೂಡಿಸುವ ಸಲುವಾಗಿ ಹಾಕಲಾಗಿತ್ತು. ಆದರೆ, ಮಹಿಷ ದಸರಾ ಬಗ್ಗೆ ವಿವಾದ ಸೃಷ್ಟಿಯಾದ ಹಿನ್ನೆಲೆ. ಫಲಕದಲ್ಲಿದ್ದ ಮಹಿಷನ ಭಾವಚಿತ್ರ ದಿಢೀರನೆ ನಾಪತ್ತೆಯಾಗಿದೆ. ಇದೀಗ ಈ ವಿಚಾರ ಕುರಿತು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net