

ಮಂಡ್ಯ: ತಾಲೂಕಿನ ಮಂಗಲ ಗ್ರಾಮದ ಚಾಮುಂಡೇಶ್ವರಿ ದೇವಾಲಯ ಆವರಣದಲ್ಲಿರುವ ಮಹಿಷಾಸುರನ ಮೂರ್ತಿಗೆ ಸಮಾನ ಮಸ್ಕರ ವೇದಿಕೆ ಹಾಗೂ ಗ್ರಾಮಸ್ಥರು ಪೂಜೆ ಸಲ್ಲಿಸುವ ಮೂಲಕ ಶುಕ್ರವಾರ ಮಹಿಷಾ ಉತ್ಸವ ಆಚರಣೆ ಮಾಡಲಾಯಿತು.
ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಎ.ಸಿ.ಲಂಕೇಶ್ ಮಂಗಲ ಮಾತನಾಡಿ, ಮೈಸೂರು ಪ್ರಾಂತ್ಯ ಸೇರಿದಂತೆ ಬಹುಪ್ರದೇಶವನ್ನು ಆಡಳಿತ ನಡೆಸಿದ ದ್ರಾವಿಡ ಸಮುದಾಯದ ಮಹಾರಾಜ ಮಹಿಷಾ ಮಹಾರಾಜರ ಸ್ಮರಿಣಾರ್ಥವಾಗಿ ಉತ್ಸವ ಆಚರಿಸುತ್ತಿದ್ದೇವೆ. ಮೈಸೂರು ರಾಜ್ಯದಿಂದ ಮಂಡ್ಯ ಜಿಲ್ಲೆ ಬೇರ್ಪಟ್ಟು 76 ವರ್ಷ ಕಳೆದಿದೆ. ಆದರೆ, ಆಚರಣೆ, ಸಂಪ್ರದಾಯಗಳು ಇನ್ನೂ ನಮ್ಮ ವ್ಯಾಪ್ತಿಯಲ್ಲಿವೆ. ದ್ರಾವಿಡ ಸಂಸ್ಕೃತಿಯ ಆಚರಣೆಗಳು ನಮ್ಮ ಜೀವನದಲ್ಲಿ ಹಾಸುಹೊಕ್ಕಿವೆ ಎಂದರು.
ಗ್ರಾಮ ಪಂಚಾಯಿತಿ ಸದಸ್ಯರಾದ ಮಹದೇವು, ಕುಮಾರಗೌಡ, ಡಿಎಸ್‌ಎಸ್ ಮುಖಂಡ ಸಂತೋಷ್ ಮಂಡ್ಯ, ಉಮಾಪತಿ, ಕೊತ್ತತ್ತಿ ಸೋಮಶೇಖರ್, ಗಿರೀಶ್, ಚಾಮೇಗೌಡ, ಪ್ರಸನ್ನ, ಶಿವ, ಸುನೀಲ್, ಸನತ್, ಶಿವರಾಮ್, ಪುಟ್ಟಸ್ವಾಮಿ ಇತರರಿದ್ದರು.