

ಯಳಂದೂರು: ಮುಂದಿನ ವರ್ಷದಿಂದ ಎಲ್ಲ ತಾಲೂಕು ಕೇಂದ್ರಗಳಲ್ಲೂ ಮಹಿಷ ದಸರಾವನ್ನು ಆಚರಣೆ ಮಾಡಲಾಗುವುದು ಎಂದು ದಸಂಸ ಜಿಲ್ಲಾ ಸಂಚಾಲಕ ಯರಿಯೂರು ಸಿ.ರಾಜಣ್ಣ ಮಾಹಿತಿ ನೀಡಿದರು.
ಶುಕ್ರವಾರ ಪಟ್ಟಣದ ಬಸ್ ನಿಲ್ದಾಣದಲ್ಲಿ ಮಹಿಷಾಸುರನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿ, ಮಹಿಷಾಸುರ ಈ ನಾಡ ದೊರೆಯಾಗಿದ್ದಾನೆ. ಆದರೆ ಈತನನ್ನು ಕೆಲವು ಪಟ್ಟಭದ್ರ ಹಿತಾಶಕ್ತಿಗಳು ರಾಕ್ಷಸನಂತೆ ಬಿಂಬಿಸಿದ್ದಾರೆ. ಮಹಿಷಮಂಡಲ ನಮ್ಮ ನಾಡಾಗಿದ್ದು ಈತನ ಹೆಸರಿನಲ್ಲಿ ಅನೇಕ ವರ್ಷಗಳಿಂದಲೂ ದಸರಾ ಆಚರಿಸಿಕೊಂಡು ಬರಲಾಗುತ್ತಿದೆ. ಈ ವರ್ಷ ಮೈಸೂರಿನಲ್ಲಿ ಆಚರಣೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇದನ್ನು ಪ್ರತಿ ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಆಚರಿಸಲಾಗುವುದು ಎಂದರು.
ಮುಖಂಡರಾದ ಮದ್ದೂರು ಚಕ್ರವರ್ತಿ, ರವಿ ಸೇರಿದಂತೆ ಅನೇಕರು ಇದ್ದರು.