ಮಹಿಳಾ ಸಂಘದಿಂದ ಸ್ವಾತಂತ್ರ್ಯೋತ್ಸವ

WhatsApp Image 2023-08-16 at 8.43.13 PM
Published on

ಮಡಿಕೇರಿ:
ಮಹದೇವ ಪೇಟೆ ಮಹಿಳಾ ಸಹಕಾರ ಸಂಘದ ವತಿಯಿಂದ ಬಸಪ್ಪ ಶಿಶುವಿಹಾರದಲ್ಲಿ ಸ್ವಾತಂತ್ರ್ಯ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು. ಸಂಘದ ಅಧ್ಯಕ್ಷೆ ಸವಿತಾ ಭಟ್ ಧ್ವಜಾರೋಹಣ ಮಾಡಿದರು. ನಂತರ ಸಂಭ್ರಮಾಚರಣೆಯ ಕಾರ್ಯಕ್ರಮಗಳು ನಡೆದವು.

ಕಲಿಯಂಡ ಸರಸ್ವತಿ ಚೆಂಗಪ್ಪ ಮತ್ತು ಕುಂತಿ ಬೋಪಯ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ದೇಶಭಕ್ತಿ ಗೀತೆ ಮತ್ತು ಭಾಷಣ ಸ್ಪರ್ಧೆಗಳನ್ನು ಸಂಘದ ಸದಸ್ಯರಿಗೆ ಏರ್ಪಡಿಸಲಾಗಿತ್ತು. ನಂತರ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.

ಆಯಿಷಾ ಹಮೀದ್ ಆಡಳಿತ ಮಂಡಳಿಯ ವಸುಂಧರಾ ಪ್ರಸನ್ನ, ಕಮಲಾ ಸುಬ್ಬಯ್ಯ, ಉಮಾ ಈಶ್ವರ್, ಶುಭಾ ವಿಶ್ವನಾಥ್, ಸಂಧ್ಯಾ ಅಶೋಕ್, ಆಯಿಷಾ ಹಮೀದ್, ಸುಶೀಲಾ ವಾಸುದೇವ್, ಗೀತಾ ಮಧುಕರ್, ಸುನೀತಾ ಸಂಪತ್ ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net