ಶೀಘ್ರವೇ ಮಹಿಳಾ ಸಹಕಾರಿ ಬ್ಯಾಂಕ್ ಆರಂಭ: ಸಮಾಜಸೇವಕ ಅನಿಕೇತನ್‌ಗೌಡ ಭರವಸೆ

16 NMG 02 (2)
Published on

ನಾಗಮಂಗಲ: ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಶೀಘ್ರವೇ ಮಹಿಳಾ ಸಹಕಾರಿ ಬ್ಯಾಂಕ್ ಸ್ಥಾಪಿಸಲಾಗುವುದು ಎಂದು ಸಮಾಜಸೇವಕ ಅನಿಕೇತನ್‌ಗೌಡ ಹೇಳಿದರು.

ತಾಲೂಕಿನ ಬೆಳ್ಳೂರು ಹೋಬಳಿಯ ದೇವಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಹಿಳಾ ಸಂಘಟನೆಗಳ ಪದಾಧಿಕಾರಿಗಳಿಗೆ ಶುಕ್ರವಾರ ಹಮ್ಮಿಕೊಂಡಿದ್ದ ಮಹಿಳಾ ಸಹಕಾರ ಬ್ಯಾಂಕ್ ಸ್ಥಾಪನೆ ಕುರಿತ ಪೂರ್ವಭಾವಿ ಸಭೆ ಉದ್ಘಾಟಿಸಿ ಮಾತನಾಡಿದರು.

ಇಂದು ಗ್ರಾಮಗಳ ವ್ಯಾಪ್ತಿಯಲ್ಲಿ ಸ್ವಸಹಾಯ ಸಂಘಗಳನ್ನು ರಚಿಸಿಕೊಂಡು ಸಾಲ ಪಡೆದು ಆರ್ಥಿಕ ಚಟುವಟಿಕೆ ಮಾಡುತ್ತಿರುವುದು ಸಾಮಾನ್ಯವಾಗಿದೆ. ಇಂದಿನ ದಿನಗಳಲ್ಲಿ ದುಡಿಯುವ ಕೈಗೆ ಕೆಲಸ ಸಿಕ್ಕರೆ ನೀವು ಸಾಲ ಸೇರಿದಂತೆ ಯಾವುದೇ ಸಮಸ್ಯೆಗೆ ಒಳಗಾಗುವಂತಿರಲಿಲ್ಲ. ತಾಲೂಕಿನಲ್ಲಿರುವ ಕೆಲ ಮುಖಂಡರು ಕೇವಲ ಚುನಾವಣೆ ಸಮಯದಲ್ಲಿ ಕಾಣಿಸಿಕೊಂಡು ಮತ ಪಡೆದ ಬಳಿಕ ಮಾಯವಾಗುತ್ತಾರೆ. ಈಗ ನಿಮ್ಮಿಂದ ಸ್ಥಾಪಿತವಾಗುತ್ತಿರುವ ಸಹಕಾರಿ ಬ್ಯಾಂಕ್ ನಿಮ್ಮ ಆರ್ಥಿಕಾಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುತ್ತದೆ. ಈ ಬ್ಯಾಂಕ್‌ಗೆ ಬಂಡವಾಳವು ನಿಮ್ಮ ಷೇರಿನ ಹಣವಾಗಿದ್ದು, ನಿಮಗೆ ಅದರ ಸೌಲಭ್ಯ ಸಿಗುವ ಮೂಲಕ ಸಾಲದ ಸುಳಿಯಲ್ಲಿ ಸಿಲುಕುವುದು ತಪ್ಪುತ್ತದೆ ಎಂದು ಹೇಳಿದರು.

ಮುಖಂಡರಾದ ಚೇತನ್‌ಕುಮಾರ್, ಗೋಪಿ, ಮಹಿಳಾ ಮುಖಂಡರಾದ ಶೈಲಜಾ, ಛಾಯಾ, ಮಂಜುಳಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net