ಗದಗ ಪಂಚಮಸಾಲಿ ಸಮಾಜದ ಮಹಿಳಾ ದಿನಾಚರಣೆ

20GDG01
ನಗರದ ಹಾಲಕೇರಿ ಶಾಖಾ ಮಠದಲ್ಲಿ ಬುಧವಾರ ಗದಗ ಪಂಚಮಸಾಲಿ ಸಮಾಜದ ಮಹಿಳಾ ಟಕದ ವತಿಯಿಂದ ಮಹಿಳಾ ದಿನಾಚರಣೆ ಆಚರಿಸಲಾಯಿತು. ದೀಪಾ ಉಗಲಾಟ, ಶಾಂತಾ ತುಪ್ಪದ, ರೇಣುಕಾ ಅಮಾತ್ಯ, ಸಾಗರಿಕಾ ಅಕ್ಕಿ, ಶುಭಾ ಕುಂದಗೋಳ, ಗೀತಾ ಉಗಲಾಟ ಸೇರಿದಂತೆ ಇತರರು ಇದ್ದರು.
Published on

ಗದಗ: ಇಂದಿನ ದಿನಗಳಲ್ಲಿ ಮಹಿಳೆಯರು ಎಲ್ಲ ೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೂ, ಮಹಿಳೆಗೆ ಅಭದ್ರತೆ ಕಾಡುತ್ತಿದೆ. ಮಹಿಳಾ ಸುರತೆಯು ಅತ್ಯಗತ್ಯವಾಗಿದೆ ಎಂದು ನೀಲಮ್ಮ ಹುಣಶೀಕಟ್ಟಿ ಹೇಳಿದರು.
ನಗರದ ಹಾಲಕೇರಿ ಶಾಖಾ ಮಠದಲ್ಲಿ ಬುಧವಾರ ಗದಗ ಪಂಚಮಸಾಲಿ ಸಮಾಜದ ಮಹಿಳಾ ಟಕ ಏರ್ಪಡಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಸಮಾಜದ ಸಾಧಕ ಮಹಿಳೆಯರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಪಂಚಮಸಾಲಿ ಸಮುದಾಯದವರು ಒಕ್ಕಲಿಗರು, ರೈತಾಪಿ ಬದುಕನ್ನು ನಡೆಸುತ್ತ ಇಂದು ದೊಡ್ಡ ಉದ್ಯಮಿಗಳಾಗಿ, ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜತೆಗೆ ಶಿಣಕ್ಕೂ ಹೆಚ್ಚಿನ ಒತ್ತು ನೀಡುತ್ತಿದ್ದಾರೆ ಎಂದರು.
ಕಸ್ತೂರಿ ದಾನಪ್ಪಗೌಡ್ರ ಮಾತನಾಡಿ, ಮಹಿಳೆಯರು ಮಾಡುವ ಕೆಲಸದಲ್ಲಿ ಕಾಯಕ ನಿಷ್ಠರು. ಹೀಗಾಗಿ ಹಠ ಬಿಡದಂತೆ ಅವರು ಕೈಗೊಳ್ಳುವ ಎಲ್ಲ ಕೆಲಸ ಕಾರ್ಯಗಳು ಯಶಸ್ವಿಯಾಗುತ್ತಿವೆ ಎಂದರು.
ಜಯಶ್ರೀ ಉಗಲಾಟ, ಸಮಾಜದ ಉನ್ನತಿಗಾಗಿ ನಾವೆಲ್ಲರೂ ಶ್ರಮಿಸಬೇಕಾಗಿದೆ. ಮಕ್ಕಳಿಗೆ ಶೈಣಿಕವಾಗಿ ಅಭಿವೃದ್ಧಿಪಡಿಸುವ ಸಲುವಾಗಿ ಯೋಜನೆಯೊಂದನ್ನು ರೂಪಿಸಿ ಅದನ್ನು ಯಶಸ್ಸು ಗೊಳಿಸಲಾಗುವದು ಎಂದರು.
ಪಾರ್ವತೆಮ್ಮ ಸಂಕಣ್ಣವರ, ನೀಲಮ್ಮ ಹುಣಶೀಕಟ್ಟಿ, ಕಸ್ತೂರಿ ದಾನಪ್ಪಗೌಡ್ರ, ಲಲಿತಾ ಪಾಟೀಲ, ಕವಿತಾ ದಂಡಿನ, ವಿಜಯಲಕ್ಷಿ$್ಮ ಕವಲೂರು, ನಾಗರತ್ನಾ ಮಾರನಬಸರಿ ಅವರನ್ನು ಸನ್ಮಾನಿಸಲಾಯಿತು. ಮಹಿಳೆಯರಿಗಾಗಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ವಿಜಶ್ರೀ ಇಳಕಲ್ಲ, ಜಯಶ್ರೀ ಪಾಟೀಲ, ಶಿವಲೀಲಾ ಅಕ್ಕಿ, ಜ್ಯೋತಿ ದಾನಪ್ಪಗೌಡ್ರ, ಸುಜಾತಾ ಗುಡಿಮನಿ, ಗಂಗಾ ತಂಗೂಡಿ, ದೀಪಾ ಉಗಲಾಟ, ಶಾಂತಾ ತುಪ್ಪದ, ರೇಣುಕಾ ಅಮಾತ್ಯ, ಸಾಗರಿಕಾ ಅಕ್ಕಿ, ಶುಭಾ ಕುಂದಗೋಳ, ಗೀತಾ ಉಗಲಾಟ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net