ಕಾಂಗ್ರೆಸ್‌ಗೆ ಷರತ್ತು ಬದ್ಧವಾಗಿ ಸಹಕಾರ: ಮಹಿಳಾ ಮುನ್ನಡೆಯ ಸದಸ್ಯೆ ಜಿ.ಪೂರ್ಣಿಮಾ ಹೇಳಿಕೆ

Press Meet
Published on

ಮಂಡ್ಯ: ಕೋಮು ಸೌಹಾರ್ದತೆ ಹಾಗೂ ಅಭಿವೃದ್ಧಿಯನ್ನು ದೃಷ್ಟಿಯನ್ನಿಟ್ಟುಕೊಂಡು ಕಾಂಗ್ರೆಸ್ ಪಕ್ಷಕ್ಕೆ ಷರತ್ತುಬದ್ಧ ಬೆಂಬಲ ನೀಡುತ್ತಿರುವುದಾಗಿ ಮಹಿಳಾ ಮುನ್ನಡೆಯ ಸದಸ್ಯೆ ಜಿ.ಪೂರ್ಣಿಮಾ ತಿಳಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಗೆದ್ದವರು ಬಂಗಲೆಯಲ್ಲಿ, ಗೆಲ್ಲಿಸಿದವರು ರಸ್ತೆಯಲ್ಲಿ ಎಂಬ ಪರಿಸ್ಥಿತಿ ಉಂಟಾಗಿದೆ. ಇದಕ್ಕೆ ಯಾರು ಕಾರಣ ಎಂಬುದನ್ನು ನಾವೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಜಿಲ್ಲೆಯ ಮೈಷುಗರ್ ಕಾರ್ಖಾನೆಯನ್ನು ಮುಚ್ಚಿ ಹಲವು ವರ್ಷಗಳು ಕಳೆದಿದ್ದರೂ, ರೈತ, ಕಾರ್ಮಿಕ, ಜನಪರ ಸಂಘಟನೆಗಳು ಹೋರಾಟ ಮಾಡುತ್ತಲೇ ಬಂದಿವೆ. ಈ ವೇಳೆ ಬಿಜೆಪಿ ಸರ್ಕಾರ ಕಾರ್ಖಾನೆಯನ್ನು ಸುಸ್ಥಿತಿಗೆ ತಂದು ಕಬ್ಬು ಬೆಳೆಗಾರರ ಬದುಕನ್ನು ಹಸನು ಮಾಡುವುದಾಗಿ ಮಾತುಕೊಟ್ಟು ಈಗ ಹಿಂದೆ ಸರಿದಿದೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.

ಕರ್ನಾಟಕ ಜನಶಕ್ತಿ ಜಿಲ್ಲಾ ಕಾರ್ಯದರ್ಶಿ ಎಂ.ಸಿದ್ದರಾಜು, ಚಂದ್ರಶೇಖರ್, ರಮಾನಂದ ತರೀಕೆರೆ, ಮಂಜುಳಾ, ವಕೀಲ ಬಿ.ಟಿ. ವಿಶ್ವನಾಥ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net