ಸಾಸ್ತಾನದ ಮಹಿಳಾ ಮಂಡಲದಿಂದ ರಕ್ಷಾಬಂಧನ

rakshabandhan
ಸಾಸ್ತಾನ ಮಹಿಳಾ ಮಂಡಲದ ಕಚೇರಿಯಲ್ಲಿ ರಕ್ಷಾಬಂಧನ ಆಚರಿಸಲಾಯಿತು. ಋಷಿರಾಜ್, ಅಕ್ಷತಾ ಪ್ರಭಾಕರ್ ಅಡಿಗ, ಸುಮಿತ್ರಾ ಸುಧಾಕರ್ ಇದ್ದರು
Published on

ಕೋಟ: ಸಾಸ್ತಾನ ಶಿಶು ಮಂದಿರದ ಆಶ್ರಯದಲ್ಲಿ ಸಾಸ್ತಾನ ಮಹಿಳಾ ಮಂಡಲ ಕಚೇರಿಯಲ್ಲಿ ರಕ್ಷಾಬಂಧನ ಇತ್ತೀಚೆಗೆ ಆಚರಿಸಲಾಯಿತು.
ಶಿಶು ಮಂದಿರ ಕಾರ್ಯದರ್ಶಿ ಅಕ್ಷತಾ ಪ್ರಭಾಕರ್ ಅಡಿಗ ಮಾತನಾಡಿ, ಮನೆಯೇ ಮೊದಲ ಪಾಠ ಶಾಲೆ. ಸಂಸ್ಕೃತಿ, ಸಂಸ್ಕಾರ, ಸಂಬಂಧಗಳ ಬೇರು ಗಟ್ಟಿಗೊಳಿಸುವಲ್ಲಿ ಮನೆಯವರ ಪಾತ್ರ ಮುಖ್ಯ ಎಂದರು.

ಹಂಗಾರಕಟ್ಟೆ ರೋಟರಿ ಅಧ್ಯಕ್ಷೆ ಲೀಲಾವತಿ ಗಂಗಾಧರ್ ಕಾರ್ಯಕ್ರಮ ಉದ್ಘಾಟಿಸಿದರು. ಸಾಸ್ತಾನ ಶಿಶುಮಂದಿರ ಸಮಿತಿ ಕೋಶಾಧಿಕಾರಿ ಋಷಿರಾಜ್ ರಕ್ಷಾ ಬಂಧನದ ಮಹತ್ವದ ಕುರಿತು ಮಾತನಾಡಿದರು.

ಮಾತಾಜಿ ಶೋಭಾ ರಕ್ಷಾಗೀತೆ ಹಾಡಿ ರಕ್ಷಾಬಂಧನದ ಶುಭಾಶಯ ಕೋರಿದರು. ಸಾಸ್ತಾನ ಮಹಿಳಾ ಮಂಡಲ ಅಧ್ಯಕ್ಷೆ ಸುಮಿತ್ರಾ ಸುಧಾಕರ್ ಉಪಸ್ಥಿತರಿದ್ದರು. ವಿಮಲಾ ವಂದಿಸಿದರು. ಮಹಿಳಾ ಮಂಡಲದ ಕಾರ್ಯದರ್ಶಿ ಜ್ಞಾನೇಶ್ವರಿ ಉಡುಪ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net