

ವಿಟ್ಲ: ದ.ಕ. ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ವಿಟ್ಲ, ವಿಟ್ಲಪಡ್ನೂರು ಗ್ರಾಮ ಪಂಚಾಯಿತಿ, ಸ್ತ್ರೀ ಶಕ್ತಿ ಗೊಂಚಲು ವಿಟ್ಲಪಡ್ನೂರು ಆಶ್ರಯದಲ್ಲಿ ಮಹಿಳಾ ಗ್ರಾಮಸಭೆ, ಪೋಷಣ್ ಮಾಸಾಚರಣೆ, ವಿಶ್ವ ಪೌಷ್ಟಿಕ ಆಹಾರ ಸಪ್ತಾಹ ಕಾರ್ಯಕ್ರಮ ಗ್ರಾಪಂ ಅಧ್ಯಕ್ಷ ಜಯಂತ ಪಿ. ಅಧ್ಯಕ್ಷತೆಯಲ್ಲಿ ನಡೆಯಿತು.
ವಿಟ್ಲ ಸಮುದಾಯ ಆರೋಗ್ಯದ ವೈದ್ಯಾಧಿಕಾರಿ ಶಮನ್ ಜೆ.ಶೆಟ್ಟಿ ಮಹಿಳೆಯರ ಆರೋಗ್ಯ, ಆಸ್ಪತ್ರೆ ಮತ್ತು ಉಪಕೇಂದ್ರಗಳಲ್ಲಿ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ಉಪನಿರ್ದೇಶಕ ಉಸ್ಮಾನ್ ಪೋಷಣ್ ಮಾಸಾಚರಣೆ, ಮಹಿಳಾ ಗ್ರಾಮಸಭೆಯ ಮಹತ್ವದ ಬಗ್ಗೆ ತಿಳಿಸಿದರು. ಸಾಂತ್ವನ ಕೇಂದ್ರದ ವಿದ್ಯಾ ಮಾಹಿತಿ ನೀಡಿದರು.
ವರ್ಗಾವಣೆಗೊಂಡ ಪಂಚಾಯಿತಿ ಕಾರ್ಯದರ್ಶಿ ಸುಜಯ ಕೆ., ಅಂಗನವಾಡಿ ಕಾರ್ಯಕರ್ತೆ ವಿಮಲಾಕ್ಷಿ, ನಿವೃತ್ತಿಗೊಂಡ ಶಾಲಾ ಮುಖ್ಯಶಿಕ್ಷಕಿ ಮೋಹಿನಿ, ಅಂಗನವಾಡಿ ಕಾರ್ಯಕರ್ತೆ ಕಮಲ, ಅಂಗನವಾಡಿ ಸಹಾಯಕಿ ಅಪ್ಪಿ ಅವರನ್ನು ಗೌರವಿಸಲಾಯಿತು.
ಉಪಾಧ್ಯಕ್ಷೆ ಪ್ರೇಮಲತಾ ಉಪಸ್ಥಿತರಿದ್ದರು. ಪಿಡಿಒ ಶ್ರೀಶೈಲ ಸ್ವಾಗತಿಸಿದರು. ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಮಮ್ತಾಜ್ ಎಚ್.ಐ. ಪ್ರಸ್ತಾವನೆಗೈದರು. ಹಿರಿಯ ಮೇಲ್ವಿಚಾರಕಿ ರೂಪಕಲಾ ವಂದಿಸಿದರು.