ಮಹಿಳೆಯರು ಉತ್ತಮ ಸಾಧನೆ ಶ್ಳಾಘನೀಯ

20blrp1
Published on

  ಬೇಲೂರು :  ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ಉತ್ತಮ ಸಾಧನೆ ಮಾಡುತ್ತಿರುವುಸು ಶ್ಳಾಘನೀಯವಾಗಿದೆ ಎಂದು ಪುರಸಭೆ ಅಧ್ಯಕ್ಷ ಎ.ಆರ್.ಅಶೋಕ್ ಹೇಳಿದರು.

ಪಟ್ಟಣದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ತಾಲೂಕು ಒಕ್ಕಲಿಗರ ಮಹಿಳಾ ಸಂಘದಿಂದ ಗುರುವಾರ ಆಯೋಜಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬರ ಜೀವನದಲ್ಲೂ ಮಹಿಳೆ ತಾಯಿಯಾಗಿ, ತಂಗಿಯಾಗಿ, ಅಕ್ಕ, ಸೊಸೆ. ಮಗಳು, ಅತ್ತೆಯಾಗಿ ಪ್ರಮುಖ ಪಾತ್ರ ವಹಿಸುತಿದ್ದಾರೆ. ಜತೆಗೆ ನಮ್ಮ ದೇಶದಲ್ಲಿ ಮಹಿಳೆಗೆ ವಿಶಿಷ್ಟ ಸ್ಥಾನದಿಂದ ಗೌರವಿಸುತ್ತೇವೆ. ಇಂತಹ ಮಹಿಳೆ ಇತ್ತೀಚಿನ ದಿನದಂದು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರ ಸೇರಿದಂತೆ ಎಲ್ಲ ಕ್ಷೇತ್ರದಲ್ಲೂ ಉತ್ತಮ ಸಾಧನೆ ಮಾಡುತಿದ್ದು, ಇಂತಹ ಮಹಿಳೆಗೆ ಗೌರವ ನೀಡುವ ಕೆಲಸವಾಗಬೇಕು. ಮತ್ತು ಸರ್ಕಾರ ಮಹಿಳೆಯರಿಗೆ ಗ್ರಾಮ, ತಾಲೂಕು, ಜಿಲ್ಲಾ ಪಂಚಾಯತಿ ಮತ್ತು ಪುರಸಭೆಗಳಲ್ಲಿ ಪುರುಷರಂತೆ ಸಮಾನ ಅವಕಾಶ ನೀಡಿದೆ. ಅದರೆ ಲೋಕಸಭೆ ಮತ್ತು ವಿಧಾನಸಭೆಯಲ್ಲಿಯೂ ಸಮಾನವಾದ ವಕಾಶದ ಮೀಸಲಾತಿ ನೀಡುವ ಮೂಲಕ ಗೌರವಿಸಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net