

ಮಂಡ್ಯ: ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸುವುದರ ಜತೆಗೆ ಸಾವಯವ ಕೃಷಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮ ರೂಪಿಸಿ ಯಶಸ್ವಿಯಾಗಿರುವ ಆರ್ಗ್ಯಾನಿಕ್ ಮಂಡ್ಯದಿಂದ ಇದೀಗ ಕೀರೆಮಡಿ ಮಹಿಳಾ ಸಹಕಾರ ಬ್ಯಾಂಕ್ ಸ್ಥಾಪಿಸಲಾಗುತ್ತಿದೆ.
ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಆರ್ಗ್ಯಾನಿಕ್ ಮಂಡ್ಯ ಾರ್ಮರ್ಸ್ ೌಂಡೇಷನ್ ವತಿಯಿಂದ ಭಾನುವಾರ ಆಯೋಜಿಸಿದ್ದ ಕೀರೆಮಡಿ ಮಹಿಳಾ ಸಮಾವೇಶದಲ್ಲಿ ಬ್ಯಾಂಕ್ ಸ್ಥಾಪನೆಯನ್ನು ೋಷಣೆ ಮಾಡಲಾಯಿತು. ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಗಳ ಮಹಿಳೆಯರನ್ನು ಸಂಘಟಿಸಿ ಕೀರೆಮಡಿ ಸಂಘವನ್ನು ಸ್ಥಾಪಿಸುವುದರ ಜತೆಗೆ ಸಾವಯವ ಕೃಷಿಗೆ ಅಗತ್ಯವಿರುವ ಸೌಲಭ್ಯವನ್ನು ಆರ್ಗ್ಯಾನಿಕ್ ಮಂಡ್ಯ ಕಲ್ಪಿಸುತ್ತಿದೆ. ಈವರೆಗೆ ಸುಮಾರು 800 ಸಂಘಗಳನ್ನು ಸ್ಥಾಪಿಸಲಾಗಿದೆ. ಮಾತ್ರವಲ್ಲದೆ ಮಾರುಕಟ್ಟೆಯನ್ನು ಒದಗಿಸಿ ಬೆಳೆಗಳನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸಿಕೊಟ್ಟಿತ್ತು. ಇದು ಜಿಲ್ಲೆಯಲ್ಲಿ ಸಂಚಲನ ಸೃಷ್ಟಿ ಮಾಡಿತ್ತು. ಈ ನಡುವೆ ಸಂಘದ ಸದಸ್ಯರಿಗೆ ಬ್ಯಾಂಕ್‌ಗಳಿಂದ ಸಾಲ ಸೌಲಭ್ಯ ಸಿಗುತ್ತಿಲ್ಲ. ಜತೆಗೆ ಚಿನ್ನಾಭರಣ ಅಡವಿಟ್ಟು ಸಾಲ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಆರ್ಗ್ಯಾನಿಕ್ ಮಂಡ್ಯದಿಂದ ಕೀರೆಮಡಿ ಮಹಿಳಾ ಸೌಹಾರ್ದ ಸಹಕಾರ ಬ್ಯಾಂಕ್ ಸ್ಥಾಪಿಸಲಾಗುತ್ತಿದೆ. ಇದರ ಬಗ್ಗೆ ಸಮಾವೇಶದಲ್ಲಿ ೋಷಣೆ ಮಾಡಲಾಯಿತು.
ಆರ್ಗ್ಯಾನಿಕ್ ಮಂಡ್ಯದ ಸಂಸ್ಥಾಪಕ ಎಸ್.ಸಿ.ಮಧುಚಂದನ್ ಮಾತನಾಡಿ, ಕೀರೆಮಡಿ ಸಂಘದಿಂದ ಹಲವು ಮಹಿಳೆಯರಿಗೆ ಅನುಕೂಲವಾಗಿದೆ. ಒಟ್ಟಾರೆ ಸಂಘಗಳಲ್ಲಿ 10 ಸಾವಿರಕ್ಕೂ ಹೆಚ್ಚು ಮಹಿಳಾ ಸದಸ್ಯರಿದ್ದಾರೆ. ಇವರೆಲ್ಲರೂ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ನಮ್ಮ ಸಂಸ್ಥೆಯಿಂದ ಸಾಧ್ಯವಾದಷ್ಟು ಸೌಲಭ್ಯ ಕೊಡಿಸಲಾಗುತ್ತಿದೆ. ಇದರ ಮುಂದುವರಿದ ಭಾಗವಾಗಿ ಶೀಘ್ರವಾಗಿ ಬ್ಯಾಂಕ್ ಸ್ಥಾಪಿಸಲಾಗುತ್ತಿದೆ. ಇಲ್ಲಿ ಸದಸ್ಯರೇ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಸೇರಿದಂತೆ ಎಲ್ಲ ಹುದ್ದೆಯನ್ನು ಅಲಂಕರಿಸುತ್ತಾರೆ ಎಂದು ವಿವರಿಸಿದರು.
ಪ್ರತಿಯೊಬ್ಬ ಸದಸ್ಯರೂ ಷೇರು ಕಟ್ಟುತ್ತಾರೆ. 10 ಸಾವಿರ ಸದಸ್ಯರು ಷೇರು ಕಟ್ಟಿದ್ದರೆ ಅವರದೇ ಬ್ಯಾಂಕ್ ತೆರೆಯಲಾಗುತ್ತದೆ. ಅದರ ಮೂಲಕ ಸಾಲ ಸೌಲಭ್ಯ ಸಿಗಲಿದೆ. ಬೇರೆ ಬ್ಯಾಂಕ್‌ಗೆ ಹೋಗುವ ಅವಶ್ಯಕತೆಯೇ ಇರುವುದಿಲ್ಲ. ಈ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ. ಈಗಾಗಲೇ ಕೀರೆಮಡಿ ಸಂಘಗಳು ಯಶಸ್ವಿಯಾಗಿದ್ದು, ಮಾರುಕಟ್ಟೆ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಲಾಗಿದೆ. ಅದೇ ರೀತಿ ಬ್ಯಾಂಕ್ ಕೂಡ ಸಾವಿರಾರೂ ಮಹಿಳೆಯರಿಗೆ ಸಹಕಾರಿಯಾಗಲಿದೆ ಎಂದರು.
ಜನಚೇತನ ಟ್ರಸ್ಟ್‌ನ ಸಂಸ್ಥಾಪಕ ಪ್ರಸನ್ನ ಎನ್.ಗೌಡ ಮಾತನಾಡಿ, ಕುಟುಂಬದ ಆರ್ಥಿಕತೆ, ಆರೋಗ್ಯ ವೃದ್ಧಿಸಲು ಗೃಹಿಣಿಯರ ಪಾತ್ರ ಅಪಾರ. ಇತ್ತೀಚೆಗೆ ಸಾವಾಜಿಕ ಕಳಕಳಿ ಉಳ್ಳವರು ಸವಾಜಸೇವಾ ಕ್ಷೇತ್ರಕ್ಕೆ ಬರುತ್ತಿರುವುದು ಒಳ್ಳೆಯ ಬೆಳವಣಿಗೆ. ಅಂತಹವರಲ್ಲಿ ಮಧುಚಂದನ್ ಕೂಡ ಒಬ್ಬರು. ಅವರು ಕೀರೆಮಡಿ ಮಹಿಳಾ ಸೌಹಾರ್ದ ಸಹಕಾರ ಸಂ ಸ್ಥಾಪನೆಗೆ ಮುಂದಾಗಿದ್ದಾರೆ. ಆ ಮೂಲಕ ಗ್ರಾಮೀಣರ ಅಭಿವೃದ್ಧಿಗೆ ಮುಂದಾಗಿದ್ದಾರೆ ಎಂದರು.
ನಗರಸಭೆ ವಾಜಿ ಸದಸ್ಯೆ ನಾಗರೇವಕ್ಕ ವಾತನಾಡಿ, ಒಂದು ಕುಕ್ಕರ್, ಸೀರೆ ನೀಡುವ ರಾಜಕಾರಣಿಗಳಿಗೆ ಮತ ವಾರಿಕೊಳ್ಳುವುದು ಎಷ್ಟು ಸರಿ ಎಂಬುದನ್ನು ಮಹಿಳೆಯರು ಯೋಚಿಸಬೇಕಿದೆ. ಇವತ್ತು ಹಣ ಹಾಕಿ ದುಪ್ಪಟ್ಟು ಹಣ ದೋಚುವುದರಲ್ಲೇ ತೊಡಗಿರುವ ರಾಜಕಾರಣಿಗಳು ಏನೇನು ಹಗರಣ ವಾಡುತ್ತಿದ್ದಾರೆಂಬುದನ್ನು ಅರಿತುಕೊಳ್ಳಬೇಕು. ಜನಪ್ರತಿನಿಧಿಯಾಗಲು ಅನರ್ಹರಾದ ವ್ಯಕ್ತಿಗಳು ಆಮಿಷಗಳನ್ನು ನಿಮ್ಮ ಮುಂದಿರಿಸಿ ಯಾವಾರಿಸುತ್ತಿದ್ದಾರೆ. ಚುನಾವಣೆ ಗೆಲ್ಲುವುದಕ್ಕೂ ಕೋಟ್ಯಂತರ ರೂ. ವೆಚ್ಚ ವಾಡುತ್ತಾರೆಂದರೆ ಯಾರು ಹೆಚ್ಚು ಭ್ರಷ್ಟರು ಎಂಬುದನ್ನು ಮೊದಲು ನಾವು ಅರಿಯಬೇಕಿದೆ. ಆದ್ದರಿಂದ ಮಹಿಳೆಯರು ಎಚ್ಚೆತ್ತುಕೊಂಡರೆ ಸವಾಜದಲ್ಲಿ ಬದಲಾವಣೆ ತರಲು ಸಾಧ್ಯ ಎಂದು ಸಲಹೆ ನೀಡಿದರು.
ಆರೋಗ್ಯ ಸಲಹೆ:
ಮೈಸೂರು ಜಯದೇವ ಹದ್ರೋಗ ಆಸ್ಪತ್ರೆಯ ಸಹಾಯಕ ಪ್ರಾಧ್ಯಾಪಕಿ ಡಾ.ಹೇಮಾ ಶಿವಲಿಂಗಯ್ಯ ಅವರು ಮಹಿಳೆಯರಿಗೆ ಆರೋಗ್ಯ ಸಮಸ್ಯೆಗಳ ಪರಿಹಾರದ ಕುರಿತು ಸಲಹೆ ನೀಡಿದರು. ರೈತ ಸಂದ ಮಹಿಳಾ ಟಕದ ಜಿಲ್ಲಾಧ್ಯಕ್ಷೆ ಯಧುಶೈಲಾ ಸಂಪತ್, ಆರ್ಗ್ಯಾನಿಕ್ ಮಂಡ್ಯದ ಸಹ ಸಂಸ್ಥಾಪಕ ಬಿ.ಎಸ್.ಪ್ರಸನ್ನ, ಸವಾಜ ಸೇವಕರಾದ ಎಂ.ಎನ್.ಚಂದ್ರಶೇಖರ್, ಸಿ.ಬಿ.ತಮ್ಮೇಗೌಡ, ಅರ್ಚನಾ ಮಧುಚಂದನ್ ಇತರರಿದ್ದರು.