

ರಾಯಚೂರು ಸಾಮಾಜಿಕ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ಆದೇಶದಂತೆ ಆಗಮಿಸಿದರೆ ಸ್ವಾಗತ ಸೇರಿ ವಿವಿಧ ಬೇಡಿಕೆಗಳು ಈಡೇರಿಸಲು ಒತ್ತಾಯಿಸಿ ಭೀಮ್ ಆರ್ಮಿ ಸಂಘಟನೆ ಮುಖಂಡರು ಶುಕ್ರವಾರ ನಗರದಲ್ಲಿ ಡಿಸಿ ಕಚೇರಿಯ ಶಿರಸ್ಥೇದಾರ ವೇಣುಮಾದವ ಮೂಲಕ ಸಿಎಂಗೆ ಮನವಿ ಸಲ್ಲಿಸಿದರು.
ಮಹೇಶ್ ಶೆಟ್ಟಿ ತಿಮರೋಡಿ ಅಶಾಂತಿ ಸೃಷ್ಟಿ ಮಾಡುತ್ತಾರೆ. ರಾಯಚೂರು ಜಿಲ್ಲೆಗೆ ಬರೋದು ಬೇಡ ಎಂದು ಕೆಲವರು ಹೇಳಿಕೆ ನೀಡಿದ್ದರು, ಧರ್ಮಸ್ಥಳದಲ್ಲಿ ಸೌಜನ್ಯ ಸೇರಿದಂತೆ ನೂರಾರು ಅಮಾಯಕ ಹೆಣ್ಣು ಮಕ್ಕಳ ಅಸಹಜ ಸಾವುಗಳ ನ್ಯಾಯಕ್ಕಾಗಿ ನಿರಂತರವಾಗಿ ಹೋರಾಟ ಮಾಡುತ್ತಿರುವ ಕಾರಣಕ್ಕೆ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಗಡೀಪಾರು ಆದೇಶದಂತೆ ಆಗಮಿಸಿದರೆ ನಾವು ಸ್ವಾಗತ ಮಾಡುತ್ತೇವೆ.
ಅಲ್ಲದೆ ಸರ್ಕಾರ ಧರ್ಮಸ್ಥಳ ಠಾಣೆಯಲ್ಲಿ ನೂರಾರು ಅಸಹಜ ಸಾವುಗಳ ಸಮಗ್ರ ಮತ್ತು ನಿಷ್ಪಕ್ಷಪಾತವಾಗಿ ನಡೆಸಬೇಕು. ಪದ್ಮಲತಾ, ವೇದದಲ್ಲಿ, ನಾರಾಯಣ ಮಾವುತ, ಯಮುನಾ, ಸೌಜನ್ಯ ಸಾವುಗಳಿಗೆ ನ್ಯಾಯ ಒದಗಿಸಬೇಕು. ಧರ್ಮಸ್ಥಳ ಅಶೋಕ ನಗರ, ಮುಂತ್ರುನಾಡಿಯ ದಲಿತ ಕುಟುಂಬಗಳಿಗೆ ಹಕ್ಕು ಪತ್ರ ನೀಡಿ, ತಲಾ ಒಂದು ಎಕರೆ ಜಮೀನು ನೀಡುವ ಬೇಡಿಕೆಗಳನ್ನು ಹಿಡೇರಿಸಬೇಕು. ಧರ್ಮಸ್ಥಳ ಭೂ ಆಕ್ರಮ, ಭೂಕಬಳಿಕೆ, ಮತ್ತು ಧರ್ಮಸ್ಥಳದಲ್ಲಿ ಸ್ತ್ರೀ ಶಕ್ತಿ ಸಂಘಗಳು ಆರ್‌ಬಿಐ ನೀತಿಗಳನ್ನು ಉಲ್ಲಂಘಿಸಿ ಹೆಣ್ಣು ಮಕ್ಕಳಿಗೆ ಹಣ ನೀಡಿ ಕಿರುಕುಳ ನೀಡುವುದು ಹೆಚ್ಚಾಗಿದ್ದು ಕೂಡಲೇ ಅದನ್ನು ತಡೆಗಟ್ಟಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಪ್ರವೀಣ ಕುಮಾರ,ದೀಪಕ್ ಭಂಡಾರಿ,ಬಾಬು ಖಾನ್,ಎಚ್.ಎಂ.ಬಾಬು,ವಿಶ್ವನಾಥ ಬಲ್ಲಿದವ ಸೇರಿ ಅನೇಕರು ಇದ್ದರು.