ಬಾಸ್ಕೆಟ್‌ಬಾಲ್ ಅಸೋಸಿಯೇಶನ್‌ ಅಧ್ಯಕ್ಷರಾಗಿ ಮಹೇಶ ಶೆಟ್ಟಿ ಆಯ್ಕೆ

web 4
Published on

ಧಾರವಾಡ: ಜಿಲ್ಲಾ ಬಾಸ್ಕೆಟ್‌ಬಾಲ್ ಅಸೋಸಿಯೇಶನ್‌ಗೆ ನೂತನ ಆಡಳಿತ ಮಂಡಳಿ ಆಯ್ಕೆಯಾಗಿದ್ದು, ಖ್ಯಾತ ಹೋಟೆಲ್ ಉದ್ಯಮಿ ಮಹೇಶ ಶೆಟ್ಟಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ರಾಮ ದಾಸಣ್ಣವರ, ಮಹೇಶ ಮಾಶಾಳ ಆಯ್ಕೆಯಾಗಿದ್ದಾರೆ. ವಿಜಯ ಬಳ್ಳಾರಿ(ಕಾರ್ಯದರ್ಶಿ) ರಾಜೇಂದ್ರ ಜಂಬಗಿ, ಶಿವಯೋಗಿ ಅಮೀನಗಡ (ಸಹ ಕಾರ್ಯದರ್ಶಿ), ಶ್ರೀಕಾಂತ ಕಂಚಿಬೈಲ (ಖಜಾಂಚಿ), ಅಶೋಕ ಕಂಚಿಬೈಲ, ಪಾಟೀಲ ಎಂ.ಎಂ., ಅಶ್ವತ್ಥಾಮ ಕುಬಾಳ, ರಾಹುಲ, ಮಹೇಶ (ಸದಸ್ಯ), ಆರ್.ಎಸ್. ಮೋಕಾಶಿ, ಕಿರಣ ಕುಂಬಾರಗೌಡ (ಕನ್ವೇನರ್ ಮತ್ತು ಟೆಕ್ನಿಕಲ್ ಕಮೀಟಿ) ಹಾಗೂ ತಾಂತ್ರಿಕ ಸಲಹೆಗಾರರಾಗಿ ಜಿ.ಎಸ್. ಜಾಧವ, ಆರ್.ಎಸ್. ನಾಯಕ, ಪಿ.ಕೆ. ಹಸನಕರ ಮತ್ತು ಮಲ್ಲು ಪಾಟೀಲ ಆಯ್ಕೆಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net