

ಹುಬ್ಬಳ್ಳಿ : ನಗರದ ಡಾ. ಆರ್.ಬಿ. ಪಾಟೀಲ ಮಹೇಶ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ 2025-26 ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಸತ್ತು ಉದ್ಘಾಟನೆ ಮತ್ತು ಸಂಸತ್ತಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಬ್ಯಾಜ್ಡ್ ವಿತರಣಾ ಸಮಾರಂಭ ಗುರುವಾರ ನೆರವೇರಿತು.
ವಿದ್ಯಾರ್ಥಿ ಸಂಸತ್ತಿನ ಬಾಲಕರ ವಿಭಾಗದ ಯಾಸೀರ ಕಟ್ಟಿಮನಿ ಮತ್ತು ವಿದ್ಯಾರ್ಥಿನಿಯರ ವಿಭಾಗದಿಂದ ಮಿನಲ್ ಕಟವಟೆ ಅಧ್ಯಕ್ಷರಾಗಿ ಆಯ್ಕೆಯಾದರು.
ಕ್ರೀಡೆ, ಸಾಹಿತ್ಯಿಕ, ಪರಿಸರ ಮತ್ತು ವಿದ್ಯಾರ್ಥಿ ಸಂಘಟನೆ ಮತ್ತು ಪ್ರತಿ ತರಗತಿ ಪ್ರತಿನಿಧಿಗಳು ಇದೇ ಸಂದರ್ಭದಲ್ಲಿ ಆಯ್ಕೆಗೊಂಡರು.
ಅತಿಥಿಯಾಗಿದ್ದ ಎನ್.ಎಲ್.ಇ. ಸಂಸ್ಥೆಯ ಗೌರವ ಕಾರ್ಯದರ್ಶಿ ಆರ್.ಎನ್. ದೇಸಾಯಿ ಮಾತನಾಡಿ, ವಿದ್ಯಾರ್ಥಿಗಳು ತಮಗೆ ವಹಿಸಿಸಿರುವ ಜವಾಬ್ದಾರಿಯನ್ನು ಶೃದ್ಧೆಯಿಂದ ನಿರ್ವಹಿಸುವಂತೆ ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಶೈಕ್ಷಣಿಕ ಮುಖ್ಯಸ್ಥ ರಿಯಾಜ್ ಬಸರಿ ಮಾತನಾಡಿದರು.
ಪ್ರಾಚಾರ್ಯ ರಾಮ ಮೋಹನ ಎಚ್.ಕೆ. ಅವರು ಸಂಸತ್ತಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಉಪ ಪ್ರಾಂಶುಪಾಲ ರಮೇಶ ಹೊಂಬಾಳಿ ಸೇರಿದಂತೆ ಇತರರು ಇದ್ದರು.
ಆಂಗ್ಲ ಭಾಷಾ ವಿಭಾಗದ ಮುಖ್ಯಸ್ಥ ನೀಲ್ ಪ್ರತಾಪನ್ ನಿರೂಪಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಐ.ಎಸ್. ಹಿರೇಮಠ ವಂದಿಸಿದರು.