ಹಬ್ಬಗಳ ಆಚರಣೆಯಲ್ಲಿ ಮಹಿಳೆಯರ ಪಾತ್ರ ಮುಖ್ಯ

Tenginakayi new
Published on

ಹುಬ್ಬಳ್ಳಿ : ಭಾರತದ ಎಲ್ಲ ಹಬ್ಬಗಳ ಆಚರಣೆಯಲ್ಲಿ ಮಹಿಳೆಯರ ಪಾತ್ರ ಮುಖ್ಯವಾಗಿದೆ. ಅದರಲ್ಲೂ ನವರಾತ್ರಿ ವೇಳೆ ಹತ್ತು ದಿನಗಳ ಕಾಲ ಮಹಿಳೆಯರು ಕೈಗೊಳ್ಳುವ ಪೂಜೆ-ಪುನಸ್ಕಾರಗಳು ನಮ್ಮ ಸಂಸ್ಕೃತಿಯನ್ನು ಉಳಿಸಿ, ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಅಭಿಪ್ರಾಯಪಟ್ಟರು.

ಇಲ್ಲಿನ ಲಿಂಗರಾಜ ನಗರದಲ್ಲಿ ಶ್ರೀ ಕಟ್ಟಿ ಮಂಗಳಾದೇವಿ ಮತ್ತು ಶ್ರೀ ವೀರಾಂಜನೇಯ ದೇವಸ್ಥಾನ ಸಮಿತಿಯಿಂದ ’ಲಿಂಗರಾಜ ನಗರ ದಸರಾ’ ಅಂಗವಾಗಿ ಸೋಮವಾರ ಆಯೋಜಿಸಿದ್ದ ದಾಂಡಿಯಾ ನೃತ್ಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇತಿ್ತೕಚಿನ ವರ್ಷಗಳಲ್ಲಿ ಮಹಿಳೆಯರು ಟಿ.ವಿ. ವೀಕ್ಷಣೆ ತ್ಯಜಿಸಿ, ಸಾಮಾಜಿಕ-ಸಾಂಸೃ್ಕಕ ಚಟುವಟಿಕೆಗಳಲ್ಲಿ ಹೆಚ್ಚು ಪಾಲ್ಗೊಳ್ಳುತ್ತಿರುವುದು ಸಂತಸದ ವಿಷಯ ಎಂದು ಹೇಳಿದರು.

ಮಹಾಪೌರ ವೀಣಾ ಬರದ್ವಾಡ ಮಾತನಾಡಿ, ನವರಾತ್ರಿ ವೇಳೆ ಮಹಿಳೆಯರು ಒಂಬತ್ತು ದಿನಗಳ ಉಪವಾಸ ಕೈಗೊಂಡು ಕೌಟುಂಬಿಕ ಹಾಗೂ ವಿಶ್ವದ ನೆಮ್ಮದಿಗೆ ಪ್ರಾರ್ಥಿಸುತ್ತಾರೆ. ಈ ಹಬ್ಬದಿಂದ ಇಡೀ ಸಮಾಜದಲ್ಲಿ ಸಹೋದರತೆ ಬೆಳೆಯುತ್ತದೆ ಎಂದು ತಿಳಿಸಿದರು.

ಪಾಲಿಕೆ ಸದಸ್ಯ ಉಮೇಶಗೌಡ ಕೌಜಗೇರಿ ಹಾಗೂ ಉದ್ಯಮಿ ರಾಜೇಂದ್ರ ಶೆಟ್ಟಿ ಮಾತನಾಡಿ, ಹಬ್ಬಗಳು ವ್ಯಕ್ತಿಯ ಸರ್ವಾಂಗೀಣ ಪ್ರಗತಿಗೆ ಪೂರಕವಾಗಿವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ದೇವಸ್ಥಾನ ಸಮಿತಿಯ ಅಧ್ಯಕ್ಷ ಪ್ರೊ. ಜಿ.ವಿ. ವಳಸಂಗ, ಭಾರತದ ಹಬ್ಬ, ಆಚರಣೆಗಳು ವಿಜ್ಞಾನದ ತಳಹದಿಯನ್ನು ಆಧರಿಸಿವೆ. ಎಲ್ಲ ಆಚರಣೆಯಲ್ಲಿ ಅಡಗಿರುವ ವೈಜ್ಞಾನಿಕತೆಯನ್ನು ಅರಿಯುವ ಕಾರ್ಯ ನಡೆಯಬೇಕಿದೆ ಎಂದರು.

ಎಂ.ಕೆ. ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ಸಂಗಮೇಶ ಮೆಣಸಿನಕಾಯಿ ನಿರೂಪಿಸಿದರು. ಡಾ. ಜಿ.ಬಿ. ಕಲಕೋಟಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net